ನಮ್ಮದೇ ಲೋಕದಲ್ಲಿ ಮುಳುಗಿ ಹೋಗಿರೋ ನಮಗೆ ತಪ್ಪು ಮಾಡ್ತಿದ್ದೇವೆ, ಆರೋಗ್ಯಕ್ಕೆ ಹಾನಿ ಮಾಡ್ತಿದ್ದೇವೆ ಅನ್ನೋ ವಿಷಯ ಗೊತ್ತೇ ಆಗ್ತಿಲ್ಲ. ಅತಿಯಾಗಿ ಮೊಬೈಲ್ ನೋಡೋದು ತಪ್ಪು ಗೊತ್ತಿದೆ, ಆದರೂ ನೋಡೋದನ್ನು ನಿಲ್ಲಿಸೋದಿಲ್ಲ.. ಇಂಥದ್ದೇ ಸಾಕಷ್ಟಿದೆ. ಈ ಏಳು ತಪ್ಪುಗಳು ಮೆದುಳಿಗೆ ಹಾನಿ ಮಾಡುತ್ತವೆ, ಯಾವುದು ನೋಡಿ..
- ವ್ಯಾಯಾಮ ಇಲ್ಲದಿರುವು, ಕೂತಲ್ಲೇ ಕೂರೋದು, ನಿಂತಲ್ಲೇ ನಿಲ್ಲೋದು, ದೇಹ ದಂಡಿಸದೇ ಇರುವುದು.
- ನಾಲ್ಕು ಗಂಟೆ, ಐದು ಗಂಟೆ ನಿದ್ದೆ ಸಾಕು ಎಂದುಕೊಳ್ಳೋದು, ಮೊಬೈಲ್ ನೋಡ್ತಾ ಕುಳಿತು ನಿದ್ದೆ ಮಾಡದೇ ಇರೋದು.
- ಜಂಕ್‌ಫುಡ್ ದಾಸರಾಗೋದು, ಉತ್ತಮ ಆಹಾರ ಸೇವಿಸದೇ ಇರೋದು, ನೀವು ತಿನ್ನುವ ಆಹಾರ ಮೆದುಳಿನ ಮೇಲೆ ನೇರ ಪರಿಣಾಮ ಬೀರುತ್ತದೆ.
- ದೊಡ್ಡ ಹೊಟ್ಟೆ ಇರುವವರು, ಶೀಘ್ರವೇ ಅದನ್ನು ಕರಗಿಸಿ, ಹೊಟ್ಟೆ ಜಾಸ್ತಿ ಇದ್ದಷ್ಟು ಮೆದುಳಿಗೆ ಸಮಸ್ಯೆ.
- ಹೊಸ ಹೊಸ ವಿಷಯಗಳನ್ನು ಕಲಿಯುವುದು, ಹೊಸ ಹಾಬಿ ಬೆಳೆಸಿಕೊಳ್ಳೋದು, ಮೆದುಳನ್ನು ಬಳಸದೇ ಇದ್ರೆ ತೊಂದರೆ ಖಂಡಿತ.
- ಅತೀ ಹೆಚ್ಚು ಪೊರ್ನ್ ನೋಡುವವರಿಗೆ ತೊಂದರೆ ತಪ್ಪಿದ್ದಲ್ಲ, ಪೊರ್ನ್ ವೀಕ್ಷಣೆಯಿಂದ ಮೆದುಳಿಗೆ ತೊಂದರೆಯಾಗುತ್ತದೆ.
- ಯಾವಾಗಲೂ ಮನೆಯಲ್ಲೇ ಕೂರೋದು, ಹೊರಗೆ ಹೋಗೋಕೆ ಇಷ್ಟಪಡದೇ ಇರೋದು, ಬಿಸಿಲು, ಗಾಳಿ, ಮಳೆ, ಚಳಿ, ಯಾವ ಅನುಭವವೂ ಬೇಡ ಎಂದುಕೊಳ್ಳೋದ್ರಿಂದಲೂ ತೊಂದರೆ ಪಕ್ಕಾ!