Monday, December 4, 2023

Latest Posts

ದೆಹಲಿ ವಾಯು ಮಾಲಿನ್ಯ: ಉನ್ನತ ಮಟ್ಟದ ಸಭೆ ಕರೆದ ಸಿಎಂ ಕೇಜ್ರಿವಾಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಲೇ ಇರುವುದರಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ. ಮಧ್ಯಾಹ್ನ 12 ಗಂಟೆಗೆ ದೆಹಲಿ ಸಚಿವಾಲಯದಲ್ಲಿ ಈ ಸಭೆ ನಡೆಯಲಿದೆ.

ದೆಹಲಿಯ ಪರಿಸರ ಸಚಿವರು ಮತ್ತು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿನ ಒಟ್ಟಾರೆ ಗಾಳಿಯ ಗುಣಮಟ್ಟವು ಸತತ ಐದನೇ ದಿನಕ್ಕೆ ‘ತೀವ್ರ’ ವಿಭಾಗದಲ್ಲಿ ಮುಂದುವರಿದಿದೆ. ಬೆಳಿಗ್ಗೆ 9 ಗಂಟೆಗೆ AQI 400ರಷ್ಟು ಅತ್ಯಂತ ಕಳಪೆ ವಿಭಾಗದಲ್ಲಿ  ದಾಖಲಾಗಿದೆ.

ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ, ಹರ್ಯಾಣ ಮತ್ತು ಪಂಜಾಬ್‌ಗಳಲ್ಲಿ ಹುಲ್ಲು ಸುಡುವುದರಿಂದಾಗಿ ನಗರದಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!