ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ವಿಧಾನಸಭಾ ಚುನಾವಣೆಯ ಅಂಗವಾಗಿ ಬಿಜೆಪಿ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆಯಾಗಿದೆ. 12 ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಸುಭಾಷ್ ರೆಡ್ಡಿ (ಎಲ್ಲಾರೆಡ್ಡಿ) ಮತ್ತು ಚಲಮಲ್ಲ ಕೃಷ್ಣಾ ರೆಡ್ಡಿ (ಮುನುಗೋಡು) ಅವರಿಗೆ ಬಿಜೆಪಿ ನಾಯಕತ್ವ ಟಿಕೆಟ್ ಹಂಚಿಕೆ ಮಾಡಿದೆ.
ಬಿಜೆಪಿ ಇದುವರೆಗೆ ನಾಲ್ಕು ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ 52 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಎರಡನೇ ಹಂತದಲ್ಲಿ ಒಬ್ಬರ ಹೆಸರು, ಮೂರನೇ ಹಂತದಲ್ಲಿ 35 ಅಭ್ಯರ್ಥಿಗಳನ್ನು ಘೋಷಿಸಿದ್ದರೆ, ನಾಲ್ಕನೇ ಹಂತದಲ್ಲಿ 12 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ನಾಯಕತ್ವ ಮಂಗಳವಾರ ಬಿಡುಗಡೆ ಮಾಡಿದೆ.
ನಾಲ್ಕು ಹಂತಗಳಲ್ಲಿ 100 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ. ಇದರಲ್ಲಿ ಎಸ್‌ಸಿಗೆ 16 ಮತ್ತು ಎಸ್‌ಟಿಗೆ 10 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.
ಬಿಜೆಪಿಯ 12 ಅಭ್ಯರ್ಥಿಗಳು
- ಚೆನ್ನೂರು (ಎಸ್‌ಸಿ)- ದುರ್ಗಂ ಅಶೋಕ್
- ಎಲ್ಲರೆಡ್ಡಿ– ವಡ್ಡೆಪಲ್ಲಿ ಸುಭಾಷ್ ರೆಡ್ಡಿ
- ವೇಮುಲವಾಡ – ತುಲಾ ಉಮಾ
- ಹಸ್ನಾಬಾದ್ – ಶ್ರೀ ರಾಮ್ ಚಕ್ರವರ್ತಿ
- ಸಿದ್ದಿಪೇಟೆ- ದೂಧಿ ಶ್ರೀಕಾಂತ್ ರೆಡ್ಡಿ
- ವಿಕಾರಾಬಾದ್ (ಎಸ್‌ಸಿ) – ಪೆದ್ದಿಂತಿ ನವೀನ್ ಕುಮಾರ್
- ಕೊಡಂಗಲ್ – ಬಂಟು ರಮೇಶ್ ಕುಮಾರ್
- ಗದ್ವಾಲ್ – ಬೋಯ ಶಿವ
- ಮಿರ್ಯಾಲಗೂಡ – ಸಾಧಿನೇನಿ ಶ್ರೀನಿವಾಸ್
- ಮುನುಗೋಡು – ಚಲಮಲ ಕೃಷ್ಣಾ ರೆಡ್ಡಿ
- ನಕಿರೇಕಲ್ (ಎಸ್‌ಸಿ)- ಎಸ್. ಮೊಘಲ್
- ಮುಗುಳು (ಎಸ್ಟಿ) – ಅಜ್ಮೀರ ಪ್ರಹ್ಲಾದ್ ನಾಯ್ಕ್