ಹೊಸದಿಗಂತ ವರದಿ, ಬನವಾಸಿ:
ಮಾರಾಟದ ಉದ್ದೇಶಕ್ಕಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬನವಾಸಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಯಲ್ಲಾಪುರ ತಾಲೂಕು ಮದನೂರು ಖಂಡ್ರನಕೊಪ್ಪದ ಮಾಲು ಲುಕ್ಕು ಲಂಬೂರ (21) ಬಂಧಿತ ಆರೋಪಿಯಾಗಿದ್ದಾನೆ. ಈತ ಶಿರಸಿ ಬನವಾಸಿ ರಸ್ತೆಯ ಕಲ್ಲಿ ಕ್ರಾಸ್ ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿದ್ದಾನೆ. ಬಂಧಿತನಿಂದ 42 ಸಾವಿರ ರೂ. ಬೆಲೆಯ 940 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.