ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ತ್ರಿಶೂರ್‌ನಲ್ಲಿ ರೂಟ್‌ಕೆನಾಲ್ ಶಸ್ತ್ರಚಿಕಿತ್ಸೆ ನಂತರ ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದಾನೆ.
ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ರೂಟ್‌ಕೆನಾಲ್ ಚಿಕಿತ್ಸೆಗೂ ಮುನ್ನ ಅನಸ್ತೀಶಿಯಾ ನೀಡಲಾಗುತ್ತದೆ.
ಅನಸ್ತೇಶಿಯಾ ನೀಡಿ ರೂಟ್‌ಕೆನಾಲ್ ಮಾಡಿದ ನಂತರ ಬಾಲಕನ ಆರೋಗ್ಯ ಏಕಾಏಕಿ ಕ್ಷೀಣಿಸಿದೆ. ಬ್ಲಡ್ ಪ್ರೆಶರ್ ಕುಸಿದಿದ್ದು ಬಾಲಕ ಮೃತರಪಟ್ಟಿದ್ದಾನೆ.
ಪೋಷಕರ ದೂರಿನ ಅನ್ವಯ ಇದೊಂದು ಅಸಹಜ ಸಾವು ಎಂದು ಪೊಲೀಸರು ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.