ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರೆಜಿಲ್‌ನ ಜನಪ್ರಿಯ ಮಾಡೆಲ್ ಲುವಾನಾ ಆಂಡ್ರೇಡ್ ಶಸ್ತ್ರಚಿಕಿತ್ಸೆ ವೇಳೆ ಕಾರ್ಡಿಯಾಕ್ ಅರೆಸ್ಟ್‌ನಿಂದ ಮೃತಪಟ್ಟಿದ್ದಾರೆ.
ಲುವಾನಾಗೆ ಕೇವಲ 29 ವರ್ಷವಾಗಿದ್ದು, ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಈ ವೇಳೆ ಕಾರ್ಡಿಯಾಕ್ ಅರೆಸ್ಟ್‌ನಿಂದ ಮೃತಪಟ್ಟಿದ್ದಾರೆ.
ಅಂದ ಹೆಚ್ಚಿಸುವ ಸಲುವಾಗಿ ಲುವಾನಾ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದರು ಎನ್ನಲಾಗಿದೆ, ಶಸ್ತ್ರಚಿಕಿತ್ಸೆ ವೇಳೆ ನಾಲ್ಕು ಬಾರಿ ಕಾರ್ಡಿಯಾಕ್ ಅರೆಸ್ಟ್ ಆಗಿದ್ದು, ತಕ್ಷಣವೇ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲುವಾನ ಮೃತಪಟ್ಟಿದ್ದಾರೆ.
ಲುವಾನಾ ಸ್ನೇಹಿತರು, ಫ್ಯಾನ್ಸ್ ದುಃಖತಪ್ತರಾಗಿದ್ದು, ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದ್ದಾರೆ.