ಹೊಸದಿಗಂತ ವರದಿ ಹುಬ್ಬಳ್ಳಿ:
ರಾಜ್ಯ ಕಾಂಗ್ರೆಸ್ ಸರ್ಕಾರ ಕೆಪಿಎಸ್ಸಿ ಪರೀಕ್ಷೆ ಆಗಮಿಸಿದ ಮಹಿಳಾ ಪರೀಕ್ಷಾರ್ಥಿಗಳ ಮಾಂಗಲ್ಯ, ಕಾಲುಂಗುರ ಹಾಗೂ ಕಿವಿ ಓಳೆ ತೆಗೆಸಿ ಮಹಿಳೆಯರಿಗೆ ಅವಮಾನ ಮಾಡಿದೆ. ಕಾಂಗ್ರೆಸ್ ಮತ್ತೆ ಮಹಿಳಾ ವಿರೋಧ ನೀತಿ ಮುಂದುವರಿಸಿದೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿಯ ಪ್ರವಾಸ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು..ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಕಾಲುಂಗುರ, ಮಾಂಗಲ್ಯ ಅತ್ಯಂತ ಪವಿತ್ರವಾಗಿದೆ. ಪರೀಕ್ಷೆ ಹಾಜರಾಗುವರ ಬಗ್ಗೆ ಅನುಮಾನವಿದ್ದರೆ ಮಾತ್ರ ಮಾಂಗಲ್ಯ, ಕಾಲುಂಗುರ ತೆಗೆಸಬೇಕಿತ್ತು. ಇದ್ಯಾವುದಿಲ್ಲದೆ ಅವುಗಳನ್ನು ತೆಗೆಯುವಂತೆ ಮಾಡಿ ಭಾರತಿಯ ನಾರಿಯರಿಗೆ ಅಪಮಾನ ಮಾಡಿದ್ದಾರೆ.
ಹಿಂದುತ್ವ ಹಾಗೂ ಹಿಂದು ಸಂಸ್ಕೃತಿ ಬಗ್ಗೆ ಸರ್ಕಾರಕ್ಕೆ ಬೆಲೆ ಇಲ್ಲದಂತಾಗಿದೆ. ಮಾಂಗಲ್ಯ ತೆಗೆಸುವ ಇವರು ಹಿಜಾಬ್ ಗೆ ಅವಕಾಶ ನೀಡಿ ಅಲ್ಪ ಸಂಖ್ಯಾತರ ತೃಷ್ಟೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕರಾದ ಅಧೀರ್ ರಂಜನ ಚೌಧರಿ, ಸಂಸದ ಜೈಯರಾಮ್ ರಮೇಶ ಹಾಗೂ ಪ್ರಿಯಾಂಕಾ ಖರ್ಗೆ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದ ಮಹಿಳೆಯ ಬಗ್ಗೆ ಇವರಿಗೆ ಇರುವ ಮನಸ್ಥಿತಿ ಗೊತ್ತಾಗುತ್ತದೆ. ಮುಂಬರುವ ದಿನಗಳಲ್ಲಿ ಮಹಿಳಾ ಸಮುದಾಯ ಕಾಂಗ್ರೆಸ್ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಮಹಿಳಾ ಮೀಸಲಾತಿ ಅನುಷ್ಠಾನ ವಿಚಾರದಲ್ಲೂ ಕಾಂಗ್ರೆಸ್ ಪಕ್ಷವು ಅನಗತ್ಯ ವಿಳಂಬ ಮಾಡಿತ್ತು. ಆದರೆ, ಬಿಜೆಪಿ ಸರಕಾರ ಮಹಿಳಾ ಮೀಸಲಾತಿ ನೀಡಿ ಐತಿಹಾಸಿಕ ಸಾಧನೆ ಮಾಡಿದೆ ಎಂದು ತಿಳಿಸಿದರು.