ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಣ್ಣ ಬೆರೆಸುವ ಪೈಂಟ್ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀ ಪೈಂಟ್ಸ್ ಕಾರ್ಖಾನೆಯಲ್ಲಿ ನಡೆದಿದೆ.
ಮಲ್ಲತ್ತಹಳ್ಳಿಯ ನಿವಾಸಿಯಾದ ಶ್ವೇತಾ (33) ಮೃತ ದುರ್ದೈವಿ.
ಶ್ರೀ ಪೈಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಶ್ವೇತಾ ಎಂದಿನಂತೆ ಇಂದೂ ಕೂಡ ಕೆಲಸದಲ್ಲಿ ತೊಡಗಿದ್ದಾರೆ. ಮಿಕ್ಸರ್ ಬಳಿ ಬಂದು ಬಣ್ಣ ಗಟ್ಟಿಯಾಗುವಿಕೆಯನ್ನು ಪರಿಶೀಲಿಸಲು ಮುಂದಾಗಿದ್ದಾರೆ. ಈ ವೇಳೆ ಅಚಾನಕ್ಕಾಗಿ ಮಹಿಳೆಯ ಜಡೆ ಮಿಕ್ಸರ್‌ಗೆ ಸಿಲಕಿದೆ. ಮಹಿಳೆ ಎಷ್ಟೇ ಕೂಗಿಕೊಂಡ್ರೂ ಕೂಡ ಮಿಕ್ಸರ್ ಸದ್ದಿನಿಂದ ಯಾರಿಗೂ ಕೇಳಿಸಿಲ್ಲ. ತದನಂತರ ಕೆಲಸಗಾರರು ಮಿಕ್ಸರ್ ಬಳಿ ಬಂದಾಗ ವಿಷಯ ಗೊತ್ತಾಗಿದೆ.
ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.