ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ಕಾರ್ನ್ ಹಿಟ್ಟು
ಕಡಲೆಹಿಟ್ಟು
ಮೆಂತೆ ಸೊಪ್ಪು
ಅಜ್ವೈನ್ ಬೀಜಗಳು
ಅರಶಿನ
ಉಪ್ಪು
ಜೀರಿಗೆ ಹುಡಿ
ಹಸಿಮೆಣಸು
ಎಣ್ಣೆ – 1ಸ್ಪೂನ್
ಮಾಡುವ ವಿಧಾನ:
1. ಕಾರ್ನ್ ಹಿಟ್ಟು ಮತ್ತು ಕಡಲೆ ಹಿಟ್ಟನ್ನು ನೀರು ಹಾಕಿ ನಾದಿಕೊಳ್ಳಿ.
2. ಇದೀಗ ನಾದಿದ ಹಿಟ್ಟಿಗೆ ಮೆಂತೆ ಸೊಪ್ಪು, ಅರಶಿನ, ಅಜ್ವೈನ್ ಮತ್ತು ಉಪ್ಪು ಹಾಕಿ ಮತ್ತೆ ಹಿಟ್ಟನ್ನು ನಾದಿಕೊಳ್ಳಿ.
3. ಈಗ ಒಂದು ಪ್ಯಾನ್‌ನಲ್ಲಿ ಒಂದು ಸ್ಪೂನ್‌ನಷ್ಟು ಎಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ಹಸಿಮೆಣಸು, ಜೀರಿಗೆ ಹುಡಿ ಹಾಕಿ.
4. ನಂತರ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿಕೊಂಡು ಪರೋಟಾ ಆಕಾರದಲ್ಲಿ ಅವುಗಳನ್ನು ಲಟ್ಟಿಸಿಕೊಳ್ಳಿ.
5. ಈಗ ಚಪ್ಪಟೆ ಪ್ಯಾನ್ ಅನ್ನು ಬಿಸಿ ಮಾಡಿಕೊಳ್ಳಿ.
6. ಎಣ್ಣೆ ಅಥವಾ ತುಪ್ಪ ಹಾಕದೇ ಪರೋಟಾವನ್ನು ಬೇಯಿಸಿ.