Sunday, December 3, 2023

Latest Posts

ಹಮಾಸ್ ಉಗ್ರರ ಸದೆಬಡೆಯಲು ಇಸ್ರೇಲ್ ರೆಡಿ, 7 ಹಡಗು, 123 ವಿಮಾನಗಳಲ್ಲಿ ಶಸ್ತ್ರಾಸ್ತ್ರ ಪೂರೈಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಸೇನೆ ಸಿಡಿದೆದ್ದಿದ್ದು, ಯುದ್ಧವನ್ನು ಅರ್ಧಕ್ಕೆ ನಿಲ್ಲಿಸುವ ಮಾತೇ ಇಲ್ಲ ಎಂದು ಹೇಳಿದೆ.

ಇತ್ತ ಹಮಾಸ್ ಉಗ್ರರನ್ನು ಹತ್ತಿಕ್ಕಲು ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಸಂಗ್ರಹಿಸುತ್ತಿದೆ. ಯುದ್ಧ ಆರಂಭವಾದಾಗಿನಿಂದ ಇಲ್ಲಿಯವರೆಗೂ ಇಸ್ರೇಲ್ ಏಳು ಹಡಗುಗಳಲ್ಲಿ ಹಾಗೂ 123 ಸರಕು ವಿಮಾನಗಳಲ್ಲಿ ಏಳು ಸಾವಿರ ಟನ್‌ನಷ್ಟು ಶಸ್ತ್ರಾಸ್ತ್ರಗಳನ್ನು ತರಿಸಿಕೊಂಡಿದೆ.

ಜರ್ಮನ್ ಕೂಡ ಇಸ್ರೇಲ್‌ಗೆ ಶಸ್ತ್ರಾಸ್ತ್ರ ರಫ್ತು ಹೆಚ್ಚು ಮಾಡಿದ್ದು, ಒಟ್ಟಾರೆ ಮೂರು ಸಾವಿರ ಮಿಲಿಯನ್‌ಗೂ ಅಧಿಕ ಮಿಲಿಟರಿ ಉಪಕರಣ ಹಾಗೂ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!