ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆ ಮುಂದುವರೆದ ಕಾರಣ ತಿರುವರೂರ್ ಹಾಗೂ ಪುದುಚೇರಿಯ ಕಾರೈಕ್ಕಲ್ನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ತಂಜಾವೂರು, ತಿರುವಾರೂರ್, ನಾಗಪಟ್ಟಣಂ, ಮೈಲಾಡುತುರೈ, ಪುದುಕೊಟ್ಟೈ, ಶಿವಗಂಗೈ, ರಾಮನಾಥಪುರಂ, ವಿರುಧುನಗರ, ತೂತುಕುಡಿ, ತೆಂಕಾಸಿ, ತಿರುನಲ್ವೇಲಿ ಮತ್ತು ಕನ್ನಿಯಾಕುಮಾರಿ ಮುಂತಾದ ಪ್ರದೇಶಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಚೆನ್ನೈನ ಐಎಂಡಿ ಮುನ್ಸೂಚನೆ ನೀಡಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.