ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿಗಳು:
ಎಲೆಕೋಸು(ಕ್ಯಾಬೇಜ್)
ಬ್ಯಾಡಗಿ ಮೆಣಸು
ಉದ್ದಿನ ಬೇಳೆ
ಹುಣಸೆ ಹಣ್ಣಿನ ಪೇಸ್ಟ್
ಜೀರಿಗೆ
ಇಂಗು
ಅರಿಶಿಣ ಪುಡಿ
ಎಣ್ಣೆ
ಉಪ್ಪು
ಮಾಡುವ ವಿಧಾನ:
* ಒಣ ಮೆಣಸು, ಉದ್ದಿನ ಬೇಳೆ, ಜೀರಿಗೆ ಹಾಕಿ ಹುರಿದು ನಂತರ ಎಲ್ಲವನ್ನೂ ಸೇರಿಸಿ ಪುಡಿ ಮಾಡಿ.
* ಬಾಣಲೆಗೆ ಎಣ್ಣೆ ಹಾಕಿ ಅದರಲ್ಲಿ ಕತ್ತರಿಸಿದ ಎಲೆಕೋಸು ಹಾಕಿ 5-10 ನಿಮಿಷ ಫ್ರೈ ಮಾಡಿ. ಇದಕ್ಕೆ ಉಪ್ಪು ಹಾಗೂ ಅರಿಶಿಣ ಪುಡಿ ಹಾಕಿ ಕ್ಯಾಬೇಜ್ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ಈಗ ಪುಡಿ ಮಾಡಿಟ್ಟ ಮೆಣಸಿನ ಪುಡಿ ಮಿಶ್ರಣಕ್ಕೆ ಸ್ವಲ್ಪ ಇಂಗು ಸೇರಿಸಿ ಅದರಲ್ಲಿ ಕ್ಯಾಬೇಜ್ ಹಾಕಿ, ಅದನ್ನು ಮಿಕ್ಸಿಗೆ ಹಾಕಿ ರುಬ್ಬಿ.
* ನಂತರ ಅದಕ್ಕೆ ಹುಣಸೆ ಹಣ್ಣಿನ ಪೇಸ್ಟ್ ಮಿಶ್ರ ಮಾಡಿದರೆ ಕ್ಯಾಬೇಜ್ ಉಪ್ಪಿನಕಾಯಿ ರೆಡಿ.