Friday, December 8, 2023

Latest Posts

KNOW WHY| ನವಜಾತ ಶಿಶುಗಳು ಅತ್ತರೆ ಕಣ್ಣೀರು ಬರುವುದಿಲ್ಲ ಏಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನವಜಾತ ಶಿಶುಗಳು ಅತ್ತರೆ ಕಣ್ಣೀರು ಬರುವುದಿಲ್ಲ..ನೀವು ಎಂದಾದರೂ ಗಮನಿಸಿದ್ದೀರಾ? ಅವರ ಅಳುವ ಶಬ್ದ ಮಾತ್ರ ಜೋರಾಗಿರುತ್ತದೆ ಹೊರತು ಕಣ್ಣಿನಿಂದ ಒಂದು ಹನಿಯೂ ಜಾರುವುದಿಲ್ಲ. ಇದಕ್ಕೆ ಕಾರಣ ಏನಂತ ಯಾರಿಗಾದರೂ ಗೊತ್ತಾ? ನೋಡೋಣ ಬನ್ನಿ.

ಹುಟ್ಟಿದ ಮಕ್ಕಳಲ್ಲಿ ಕಣ್ಣೀರಿನ ನಾಳ/ಗ್ರಂಥಿಗಳು ಸಂಪೂರ್ಣವಾಗಿ ರೂಪುಗೊಂಡಿರುವುದಿಲ್ಲ. ಇದರಿಂದಲೇ ಮಕ್ಕಳು ಎಷ್ಟೇ ಜೋರಾಗಿ ಅತ್ತರೂ ಕಣ್ಣೀರು ಬರುವುದಿಲ್ಲ. ಎರಡು ಅಥವಾ ಮೂರು ತಿಂಗಳ ಬಳಿಕ ಈ ನಾಳಗಳು ರೂಪುಗೊಂಡು ಕಾರ್ಯನಿರ್ವಹಿಸುತ್ತವೆ. ಅದುವರೆಗೂ ಎರಡೂ ಕೈಗಳ ಮುಷ್ಟಿ ಬಿಗಿ ಮಾಡಿ, ಮುಖವನ್ನೆಲ್ಲಾ ಗಟ್ಟಿಕ್ಕಿಕೊಂಡು ಕಿರುಚುತ್ತವೆ ಹೊರತು ಕಣ್ಣಿಂದ ಒಂದು ಹನಿಯೂ ಬರುವುದಿಲ್ಲ.

ಹುಟ್ಟಿನಿಂದಲೇ ಮಕ್ಕಳ ದೇಹದ ಬೆಳವಣಿಗೆಯಲ್ಲಿ ಬಹಳಷ್ಟು ಬದಲಾವಣೆಗಳು ಸಂಭವಿಸುತ್ತವೆ. ಪ್ರತಿ ತಿಂಗಳು ಬೆಳೆದಂತೆ, ಅವರ ದೇಹವು ಬಹಳಷ್ಟು ಬದಲಾವಣೆಯಾಗುತ್ತದೆ. ಈ ಬದಲಾವಣೆಯ ರೂಪದಲ್ಲಿ ಕಣ್ಣೀರಿನ ನಾಳವೂ ರೂಪುಗೊಳ್ಳುತ್ತದೆ.

ಕಣ್ಣುರೆಪ್ಪೆಯ ಕೆಳಗೆ ಬಾದಾಮಿ ಆಕಾರದ ಗ್ರಂಥಿಯಿದೆ. ಈ ಗ್ರಂಥಿಯಿಂದ ಕಣ್ಣೀರು ಬರುತ್ತದೆ. ಈ ಗ್ರಂಥಿಯು ಕಣ್ಣುಗಳಲ್ಲಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಈ ಕಾರಣದಿಂದಾಗಿ, ಕಣ್ಣಿನ ಚಲನೆ ಸುಲಭವಾಗುತ್ತದೆ. ಶಿಶುಗಳು ಬೆಳೆದಂತೆ ಈ ಗ್ರಂಥಿಯೂ ಬೆಳೆದು ಕಾರ್ಯನಿರ್ವಹಿಸಲು ಶುರುಮಾಡುತ್ತದೆ ಅಂತಾರೆ ಮಕ್ಕಳ ತಜ್ಞರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!