ಹೊಸದಿಗಂತ ವರದಿ,ಆಲೂರು:
ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆಯಾಗಿದ್ದರಿಂದ ತಾಲ್ಲೂಕು ಬಿಜೆಪಿ ವತಿಯಿಂದ ಶನಿವಾರ ಬಸ್ ನಿಲ್ದಾಣ ಮುಂಭಾಗ ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮ ಹಂಚಿಕೊಂಡ ಕಾರ್ಯಕರ್ತರು ವಿಜಯೇಂದ್ರ ಪರ ಘೋಷಣೆ ಕೂಗಿದರು.
ಈ ವೇಳೆ ಲೋಕೇಶ್ ಕಣಗಾಲ್ ಹಾಗೂ ಅಜಿತ್ ಚಿಕ್ಕಣಗಾಲ್ ಮಾತನಾಡಿ ಈಗಾಗಲೇ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಮತ್ತು ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿ ನಾವು ಪಕ್ಷ ಸಂಘಟನೆ ಮಾಡಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದೇವೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸದೃಢವಾಗಿ ಬೆಳೆಯಲಿದೆ’ ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಲೋಕೇಶ್ ಕಣಗಾಲ್,ಅಜಿತ್ ಚಿಕ್ಕಣಗಾಲ್,ಅಬ್ಬನ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ, ಸ್ನೇಹಜೀವಿ ಗಣೇಶ್ ಹನುಮಂತೇಗೌಡ,ರುದ್ರೇಗೌಡ, ಹೇಮಂತ್,ಕಿರಣ್ ಹೊಳೆ ಬೆಳ್ಳೂರು,ನಂಜುಂಡಪ್ಪ, ಜೆಸಿಬಿ ರವಿ,ದರ್ಶನ್ ಕೆರಹಳ್ಳಿ,ಪಾಲಕ್ಷ ಕೆರೆಹಳ್ಳಿ,ಹಾಗೂ ಇತರರು ಉಪಸ್ಥಿತರಿದ್ದರು.