ಅಯೋಧ್ಯೆ ದೀಪೋತ್ಸವದಲ್ಲಿ ಗಿನ್ನೆಸ್ ದಾಖಲೆ: ಏಕಕಾಲದಲ್ಲಿ ಬೆಳಗಿತು 22 ಲಕ್ಷ ದೀಪಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ದೀಪಾವಳಿ (Deepavali 2023) ಹಿನ್ನೆಲೆಯಲ್ಲಿ ರಾಮ ಜನ್ಮಭೂಮಿ ಅಯೋಧ್ಯೆಯು ದೀಪಗಳಲ್ಲಿ ಮಿಂದೆದ್ದಿದೆ. ಸರಯೂ ನದಿ ತೀರ ಸೇರಿ ಅಯೋಧ್ಯೆಯ ಆರು ಘಾಟ್‌ಗಳಲ್ಲಿ ಸುಮಾರು 22 ಲಕ್ಷ ದೀಪಗಳನ್ನು ಬೆಳಗಿರುವುದು ದಾಖಲೆಯಾಗಿದೆ.

ಭಕ್ತರು ಉರಿಸಿದ ದೀಪಗಳ ಬೆಳಕು, ಬೆಳಕಿನ ಹಬ್ಬ ದೀಪಾವಳಿಯ ಮೆರಗನ್ನು ಹೆಚ್ಚಿಸಿತು.

ಅಯೋಧ್ಯೆಯ 51 ಘಾಟ್‌ಗಳಲ್ಲಿ ಏಕಕಾಲದಲ್ಲಿ ಸುಮಾರು 22.23 ಲಕ್ಷ ದೀಪಗಳನ್ನು ಬೆಳಗಿಸಿ ಹೊಸ ಗಿನ್ನೆಸ್ ದಾಖಲೆ ನಿರ್ಮಿಸಲಾಗಿದೆ.

2022 ರಲ್ಲಿ ರಾಮ್ ಕಿ ಪೈರಿಯ ಘಾಟ್‌ ಗಳಾದ್ಯಂತ 17 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಲಾಯಿತು. ಆದಾಗ್ಯೂ, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಕೇವಲ ಐದು ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬೆಳಗಿದ ಆ ದೀಪಗಳನ್ನು ಪರಿಗಣನೆಗೆ ತೆಗೆದುಕೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!