ದಿನಭವಿಷ್ಯ| ನಿಮ್ಮ ಉತ್ತಮ ಯೋಜನೆಯೂ ಇಂದು ವಿಫಲವಾದೀತು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯು ವಿರಿ. ನಿಮ್ಮ ಆಸಕ್ತಿಯ ವಿಷಯದಲ್ಲಿ  ಗಮ ನಾರ್ಹ ಸಾಧನೆ. ನಿಮ್ಮ ಮೆಚ್ಚುಗೆ ಪಡೆಯಲು ಕೆಲವರ ಯತ್ನ.

ವೃಷಭ
ನಿಮ್ಮ ಸ್ನೇಹ ಬಳಗ ದೊಡ್ಡದು. ಹಾಗಾಗಿ ಸಮಸ್ಯೆ ಬಂದರೂ ಅವರಿಂದ ನೆರವು ಸಿಗುವುದು. ಇಂದು ಅಂತಹ ನೆರವು ಪಡೆಯುವ ಸಮಯ.

ಮಿಥುನ
ದೇವರ ಮಂದಿರ ಭೇಟಿ ಸಂಭವ.  ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೂ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಬಹುದು. ಮಿತ್ರ ಭೇಟಿ, ಖರ್ಚು ನಿಯಂತ್ರಿಸಿ.

ಕಟಕ
ವೃತ್ತಿಯಲ್ಲಿ ಅತ್ಯಂತ ಸಫಲ ಮತ್ತು ಸುಗಮ ದಿನ. ನಿಮ್ಮ  ನಾಯಕತ್ವ ಗುಣವು ಬೆಳಕಿಗೆ ಬರುವುದು. ಉದ್ದೇಶಿತ ಗುರಿ ಸಾಧನೆ. ಕೌಟುಂಬಿಕ ಸಹಕಾರ.

ಸಿಂಹ
ಚಿಂತೆ, ಸಮಸ್ಯೆ, ಕಷ್ಟ ಇಲ್ಲದ ನಿರಾಳ ದಿನ. ಹಾಗೆಂದು ಒಂದೇ ದಿನ ಎಲ್ಲಾ ಕೆಲಸಗಳನ್ನು ಕೈಗೆತ್ತಿಕೊಳ್ಳದಿರಿ. ಎಲ್ಲವೂ ಅಪೂರ್ಣ ವಾಗಿ ಉಳಿದೀತು.

ಕನ್ಯಾ
ನಿಮ್ಮ ಬದುಕಿಂದು ತಿರುವು ದೊರಕೀತು. ಸಂಬಂಧಗಳು ಆದ್ಯತೆಯ ವಿಷಯವಾಗುವುದು. ಆರ್ಥಿಕ ಲಾಭ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ.

ತುಲಾ
ಹಣಕ್ಕೆ ಸಂಬಂಧಿಸಿದ ಗೊಂದಲಗಳನ್ನು ಸರಿಪಡಿಸಿಕೊಳ್ಳಲು ಆದ್ಯತೆ ಕೊಡಿ. ಅದನ್ನು ಹಾಗೇ ಮುಂದುವರಿಯಲು ಬಿಡಬೇಡಿ.

ವೃಶ್ಚಿಕ
ವೃತ್ತಿಯಲ್ಲಿ , ವ್ಯವಹಾರದಲ್ಲಿ ಎಲ್ಲವೂ ಸುಗಮವಾಗಿ ಸಾಗುವುದು. ಆದರೆ ಕೌಟುಂಬಿಕ ಪರಿಸ್ಥಿತಿ ಸಮಸ್ಯೆ ಮತ್ತು ಒತ್ತಡ ಸೃಷ್ಟಿಸೀತು.

ಧನು
ನಿಮ್ಮನ್ನು ಇಂದು ಯಾರೂ ಮಣಿಸ ಲಾರರು. ವಾದ, ಉದ್ದಿಮೆ, ಕ್ರೀಡೆ ಯಾವುದರಲ್ಲೂ ನೀವೇ ಗೆಲ್ಲುವಿರಿ. ಈ ದಿನ ಅತ್ಯಂತ ಸಫಲ ದಿನ.

ಮಕರ
ಆರ್ಥಿಕವಾಗಿ ನಿಮಗೆ ಅನುಕೂಲಕರ ದಿನ. ವ್ಯವಹಾರದಲ್ಲಿ ಲಾಭ. ಆದರೆ ನಿಮ್ಮ ಆಪ್ತರೇ ನಿಮ್ಮ ವಿರುದ್ಧ ಕಾರ್ಯಾಚರಿಸುವ ಸಾಧ್ಯತೆಯಿದೆ.

ಕುಂಭ
ನಿಮ್ಮ ಉತ್ತಮ ಯೋಜನೆಯೂ ಇಂದು ವಿಫಲವಾದೀತು. ಹಾಗಾಗಿ ಅತಿಯಾದ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡಬೇಡಿ. ಸಂಯಮವಿರಲಿ.

ಮೀನ
ಇತರರಿಂದ ಇಂದು ನೀವು ಉಪಯುಕ್ತ ಪಾಠ ಕಲಿಯುವಿರಿ. ಅದು ಕುಟುಂಬದಲ್ಲಾಗಬಹುದು, ವೃತ್ತಿಯಲ್ಲಾ
ಗಬಹುದು. ನಿಮ್ಮದೇ ನಿಲುವಿಗೆ ಅಂಟಿಕೊಳ್ಳದಿರಿ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!