ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’ ಚಿತ್ರಕ್ಕೆ ದೇಶಾದ್ಯಂತ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ದೊರೆತಿದೆ. ಇದೇ ವೇಳೆಯಲ್ಲಿ ಮಹಾರಾಷ್ಟ್ರದ ಮಾಲೆಗಾಂವ್ ಜಿಲ್ಲೆಯ ಕೆಲವು ಅಭಿಮಾನಿಗಳು ಚಿತ್ರಮಂದಿರದೊಳಗೆ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿ, ಅತಿರೇಕತೆ ಮರೆದಿದ್ದಾರೆ.
ಥಿಯೇಟರ್ ಒಳಗೆ ಪಟಾಕಿ ಹಚ್ಚಿದ್ದರಿಂದ ಪಟಾಕಿ ಚಿತ್ರವೀಕ್ಷಕರ ಮೇಲೆ ಸಿಡಿದು, ಬೆಚ್ಚಿ ಬೀಳುವಂತೆ ಮಾಡಿದೆ. ದಿಢೀರ್ ಸಿನಿಮಾ ಮಂದಿರದ ಒಳಗೆ ಅಭಿಮಾನಿಗಳು ಪಟಾಕಿ ಹಚ್ಚಿದ್ದರಿಂದ ಅವು ಚಿತ್ರ ನೋಡುತ್ತಿದ್ದಂತ ವೀಕ್ಷಕರ ಮೇಲೆ ಸಿಡಿದಿದ್ದು, ಭಯಭೀತರಾದ ಪ್ರೇಕ್ಷಕರು ಸುರಕ್ಷತೆಗಾಗಿ ಹೆಲ್ಟರ್-ಸ್ಕೆಲ್ಟರ್ ಓಡುತ್ತಿರುವಾಗ ಆಸನಗಳಿಂದ ಹಲವಾರು ರಾಕೆಟ್ ಗಳು ಹಾರಿವೆ. ಇದರಿಂದ ಕೆಲ ಕಾಲ ಪರಿಸ್ಥಿತಿ ಆತಂಕ ಮೂಡಿಸಿದೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದ್ದು, ಘಟನೆಯಿಂದ ಲಘು ಕಾಲ್ತುಳಿತದಂತಹ ಪರಿಸ್ಥಿತಿಗೆ ಕಾರಣವಾಯಿತು.
ಘಟನೆ ದೃಢಪಡಿಸಿದ ಚವಾನಿ ಪೊಲೀಸ್ ಇನ್ ಸ್ಪೆಕ್ಟರ್ ರಘುನಾಥ್ ಶೇಗರ್, ಈ ಬಗ್ಗೆ ಪ್ರಕರಣ ದಾಖಲಿಸುವ ಪ್ರಕ್ರಿಯೆಯಲ್ಲಿದ್ದೇವೆ. ಯಾವುದೇ ಗಾಯಗಳು ವರದಿಯಾಗಿಲ್ಲ, ಅಥವಾ ಯಾವುದೇ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿಲ್ಲ, ಆದರೆ ತನಿಖೆಯ ನಂತರ ನಾವು ಅಗತ್ಯ ಕ್ರಮಗಳ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.