ಆನ್ ಲೈನ್‌ನಲ್ಲಿ ಅರ್ಧ ಕೋಟಿ ನಗದು ವಂಚನೆ: ಮೂವರು ವಿದೇಶಿ ಪ್ರಜೆಗಳ ಬಂಧನ

ಹೊಸ ದಿಗಂತ ವರದಿ ವಿಜಯಪುರ:

ಉದ್ಯಮಿಗೆ ಆನ್ ಲೈನ್ ನಲ್ಲಿ ಅರ್ಧ ಕೋಟಿ ರೂ.ಗಳಿಗೂ ಹೆಚ್ಚು ಹಣ ವಂಚಿಸಿದ ಮೂವರು ನೈಜಿರೀಯಾ ದೇಶದ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ನೈಜಿರೀಯಾದ ಪೀಟರ್ (38), ಹ್ಯಾಪಿ (40), ಓಬಿನ್ನಾ ಸ್ಟೇನ್ಲಿ (42) ಬಂಧಿತ ಆರೋಪಿಗಳು.

ನಗರದ ಉದ್ಯಮಿಯೊಬ್ಬರಿಗೆ 59,12,765 ನಗದು ವಂಚನೆ ಮಾಡಿದ್ದರು. ಇನ್ನೂ ಕ್ರಿಪ್ಟೋ ಮೈನಿಂಗ್ ಮೂಲಕ ಹಣ ಹೂಡಿಕೆ ಮಾಡಿದೆ. ಶೇ. 200 ಲಾಭಾಂಶ ಪಡೆಯಬಹುದು ಎಂದು ಆರೋಪಿಗಳು ನಂಬಿಸಿ, ನಗದು ವಂಚಿಸಿದ್ದಾರೆ. ಇದನ್ನು ಗಂಭೀರ ಪರಿಗಣಿಸಿದ ಪೊಲೀಸರು ಮೊದಲು ಐದು, ಸದ್ಯ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 21 ಮೊಬೈಲ್, 18 ಸೀಮ್‌ಗಳು, ಒಂದು ಲ್ಯಾಪ್‌ಟಾಪ್, ಎರಡು ಪೆನ್‌ಡ್ರೈವ್, ಒಂದು ಡೊಂಗಲ್, ಎರಡು ಎಟಿಎಂ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂಬಂಧ ವಿಜಯಪುರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!