ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದೆಲ್ಲೆಡೆ ಸಂಭ್ರಮದ ದೀಪಾವಳಿ ಆಚರಣೆ ಮಾಡಲಾಗುತ್ತಿದೆ, ಈ ಮಧ್ಯೆ ಹವಾಮಾನ ಇಲಾಖೆ ಶಾಕಿಂಗ್ ಮಾಹಿತಿ ನೀಡಿದ್ದು, ರಾಜಧಾನಿ ಬೆಂಗಳೂರಿನ ಹವಾಮಾನ ಗುಣಮಟ್ಟ ತೀವ್ರಪ್ರಮಾಣದಲ್ಲಿ ಕುಸಿದಿದೆ ಎಂದು ಹೇಳಿದೆ.
ಎರಡು ದಿನಗಳಿಂದ ನಗರದ ವಾಯುಗುಣಮಟ್ಟ ಸೂಚ್ಯಂಕ 193ಕ್ಕೆ ಏರಿಕೆಯಾಗಿದೆ ಎಂದು ಹವಾಮಾನ ಸಂಸ್ಥೆ ಆಕ್ಯು ವೆದರ್ ವರದಿ ಮಾಡಿದೆ. ಈ ಹವಾಮಾನದಿಂದ ಗಂಟಲಿನ ಕಿರಿಕಿರಿ, ಉಸಿರಾಟದ ತೊಂದರೆ ರೋಗಲಕ್ಷಣಗಳನ್ನು ಅನುಭವಿಸುವ ಸಾಧ್ಯತೆ ಇದೆ, ಅನಾವಶ್ಯಕ ಓಡಾಟ ತಪ್ಪಿಸಿ ಎಂದು ಹೇಳಲಾಗಿದೆ.
ಅಸ್ತಮಾ ಅಥವಾ ಉಸಿರಾಟದ ತೊಂದರೆ ಇರುವವರಿಗೆ ಮಾತ್ರ ಅಲ್ಲ, ಆರೋಗ್ಯವಂತ ವ್ಯಕ್ತಿಗಳಿಗೂ, ವಾಯುಮಾಲೀನ್ಯದಿಂದ ಉಸಿರಾಟದ ತೊಂದರೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂದಿನ ವಾಯುಗುಣಮಟ್ಟ 193 ಆಗಿದ್ದು, ಇದು ಆರೋಗ್ಯಕ್ಕೆ ಒಳ್ಳೆಯದಲ್ಲಿ ಎಂದು ಆಕ್ಯು ವೆದರ್ ವರದಿಯಲ್ಲಿ ಹೇಳಿದೆ. ಇನ್ನು ಗಾಳಿಯಲ್ಲಿ ಎನ್‌ಒ2 ಹಾಗೂ ಓಜೋನ್ ಪ್ರಮಾಣ ಉತ್ತಮವಾಗಿದೆ ಎಂದು ಹೇಳಲಾಗಿದೆ.
ಕೆಲ ದಿನಗಳವರೆಗೆ ಹೀಗೆ ಮಾಡಿ..
- ಹೊರಗೆ ನಿಂತು ಅಥವಾ ಕುಳಿತು ವ್ಯಾಯಾಮ, ವಾಕಿಂಗ್ ಅಥವಾ ಜಾಗಿಂಗ್ ಮಾಡಬೇಡಿ.
- ಹೊರಗೆ ಹೋಗುವ ಸಂದರ್ಭದಲ್ಲಿ ಮಾಸ್ಕ್ ಧರಿಸಿ
- ಮನೆ ಅಥವಾ ಕಚೇರಿಯಲ್ಲಿ ಏರ್ ಪ್ಯೂರಿಫೈರ್ ಬಳಕೆ ಮಾಡಿ
- ಸ್ಟೀಮ್ ಬಾತ್ ಬಳಸಿ
- ಉಸಿರಾಟದ ವ್ಯಾಯಾಮಗಳನ್ನು ಮಾಡಿ
- ಹೆಚ್ಚು ನೀರು ಕುಡಿಯಿರಿ ಹಾಗೂ ವಿಟಮಿನ್ ಸಿ ಇರುವ ಹಣ್ಣುಗಳನ್ನು ಸೇವಿಸಿ