ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಂಡನ್ನ ಮನೆಯೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.
ಪಶ್ಚಿಮ ಲಂಡನ್ನಲ್ಲಿ ಘಟನೆ ನಡೆದಿದ್ದು, ಇವರೆಲ್ಲರೂ ಭಾರತೀಯ ಮೂಲದವರು ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ಅಗ್ನಿ ಅವಘಡ ಸಂಭವಿಸುವ ಮುನ್ನ ದೀಪಾವಳಿ ಸಂಭ್ರಮದಲ್ಲಿ ಕುಟುಂಬ ತೊಡಗಿದ್ದು, ಯಾವ ಕಾರಣದಿಂದ ಬೆಂಕಿ ಹೊತ್ತಿದೆ ಎನ್ನುವ ವಿಷಯ ತಿಳಿದುವಂದಿಲ್ಲ.
ದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿದ್ದ ಕಾರಣ ಮೃತರ ಗುರುತು ಪತ್ತೆಯಾಗಿಲ್ಲ. ಈ ದುರಂತದ ಬಗ್ಗೆ ಅತೀವ ಬೇಸರವಿದೆ, ಪ್ರಾಣ ಕಳೆದುಕೊಂಡವರ ಪ್ರೀತಿಪಾತ್ರರ ಜತೆ ನಾವಿದ್ದೇವೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ಮುಖ್ಯ ಅಧೀಕ್ಷಕ ಸೀನ್ ವಿಲ್ಸನ್ ಹೇಳಿದ್ದಾರೆ.