ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಾಂಗೀಯ ಹಿಂಸಾಚಾರಕ್ಕೆ ಮಣಿಪುರ ತತ್ತರಿಸಿದ್ದು, ರಾಷ್ಟ್ರವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಒಂಬತ್ತು ಮೈತೇಯಿ ಉಗ್ರಗಾಮಿ ಸಂಘಟನೆಗಳು ಹಾಗೂ ಅವುಗಳ ಸಹ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಭದ್ರತಾ ಪಡೆಗಳ ಮೇಲೆ ಮಾರಣಾಂತಿಕ ದಾಳಿ ನಡೆಸುತ್ತಿರುವ ಉಗ್ರ ಸಂಘಟನೆಗಳನ್ನು ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧಿಸಿದೆ.
ಪೀಪಲ್ಸ್ ಲಿಬರೇಷನ್ ಆರ್ಮಿ, ಅದರ ರಾಜಕೀಯ ವಿಭಾಗವಾದ ಕ್ರಾಂತಿಕಾರಿ ಪೀಪಲ್ಸ್ ಫ್ರಂಟ್, ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ ಹಾಗೂ ಅದರ ಸಶಸ್ತ್ರ ವಿಭಾಗ ಮಣಿಪುರ ಪೀಪಲ್ಸ್ ಆರ್ಮಿಯನ್ನು ನಿಷೇಧಿಸಲಾಗಿದೆ.
ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಂಗ್ಲೀಪಾಕ್, ಅದರ ಸಶಸ್ತ್ರ ವಿಭಾಗ ರೆಡ್ ಆರ್ಮಿ, ಕಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿ, ಅದರ ಸಶಸ್ತ್ರ ವಿಭಾಗ, ಕಂಗ್ಲೇ ಯೋಲ್ ಕನ್ಬಾ ಲುಪ್ಸ, ಮನ್ವಯ ಸಮಿತಿ ಮತ್ತು ಅಲಯನ್ಸ್ ಫಾರ್ ಸೋಷಿಯಲಿಸ್ಟ್ ಯೂನಿಟಿ ಕಂಗ್ಲೀಪಾಕ್ ಅನ್ನು ನಿಷೇಧಿಸಲಾಗಿದೆ.