ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತರ ಸಾಲಮನ್ನಾ ಮಾಡಿ, ಆಗ ಒಪ್ತೇನೆ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಮಾಜಿ ಸಿಎಂ ಎಚ್‌ಡಿಕೆ ಸವಾಲ್ ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಡ್ಯುಪ್ಲಿಕೇಟ್ ಸಿಎಂ, ಇವರ ಗ್ಯಾರೆಂಟಿ ಯೋಜನೆಗಳು ವಿಫಲವಾಗಿದೆ ಎಂದು ಎಚ್‌ಡಿಕೆ ದೂರಿದ್ದರು. ಅದಕ್ಕೆ ಸಿಎಂ ಕೂಡ ತಿರುಗೇಟು ನೀಡಿದ್ದು, ಕೋಟ್ಯಂತರ ಬಡವರಿಗೆ ನಮ್ಮಿಂದ ಸಹಾಯವಾಗಿದೆ ಎಂದಿದ್ದರು.
ಇದಕ್ಕೆ ಮತ್ತೆ ಎಚ್‌ಡಿಕೆ ಮಾತನಾಡಿದ್ದು, ನೀವು ಬಡವರ ಬಗ್ಗೆ ಮಾತನಾಡೋದು ಆಶ್ಚರ್ಯ, ಐಶಾರಾಮಿಯಾದ ನೀವು ಮೇಲೆ ಸರಳರಾಮಯ್ಯ, ಒಳಗೆ ಐಶಾರಾಮಯ್ಯ? ಅಲ್ವಾ? ಗ್ಯಾರೆಂಟಿ ಬಗ್ಗೆ ನನಗೆ ಹೊಟ್ಟೆ ಉರಿ ಇಲ್ಲ. ಐದು ಗ್ಯಾರೆಂಟಿ ಜಾರಿಯಾಗಿದೆ ಆದ್ರೆ ನೆಟ್ಟಗೆ ಆಗಿಲ್ಲ, ಸಾಲಮನ್ನಾ ಮಾಡಿ ತೋರಿಸಿ ನಿಮ್ಮ ಸರ್ಕಾರವನ್ನು ಒಪ್ಪೋಣ ಎಂದಿದ್ದಾರೆ.