ಹೊಸದಿಗಂತ ವರದಿ ಮೈಸೂರು:
ಜಿಲ್ಲೆಯ ಹುಣಸೂರು ನಗರದ ಪೊಲೀಸರು ಇಂದು ರೌಡಿಶೀಟರ್ಗಳ ಪರೇಡ್ ನಡೆಸಿದರು. ಈದ್ ಮಿಲಾದ್ ಹಾಗೂ ಹನುಮ ಜಯಂತಿ ಹಿನ್ನೆಲೆ ರೌಡಿ ಶೀಟರ್ಗಳ ಪರೇಡ್ ನಡೆಸಿದ ಹುಣಸೂರು ನಗರ ಠಾಣೆ ಇನ್ಸ್ಪೆಕ್ಟರ್ ದೇವೇಂದ್ರ, ಶಾಂತಿ ಕದಡದಂತೆ ಎಚ್ಚರಿಕೆ ನೀಡಿದರು.
ರೌಡಿ ಪಟ್ಟಿಯಲ್ಲಿರುವವರು ಪೊಲೀಸರು ಸೂಚಿಸಿದಾಗ ಠಾಣೆಗೆ ಬರಬೇಕು ಮತ್ತು ಹೊರ ಊರಿಗೆ ಹೋಗುವ ಮುನ್ನ ಮಾಹಿತಿ ನೀಡಬೇಕು. ಸಮಾಜಘಾತುಕ ಕೃತ್ಯದಲ್ಲಿ ತೊಡಗುವುದು ಬಿಟ್ಟು, ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು. ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.