ಹೊಸದಿಗಂತ ವರದಿ ಮೈಸೂರು:
ನಗರದ ಚಾಮುಂಡಿಬೆಟ್ಟದಲ್ಲಿರುವ ದಾಸೋಹ ಭವನದಲ್ಲಿ ಬಿಸಿ ಸಾಂಬಾರ್ ಬಿದ್ದು ಅಡುಗೆ ಸಿಬ್ಬಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಚಿನ್ನಸ್ವಾಮಿ (29 ಗಾಯಗೊಂಡವರು.
ದಾಸೋಹ ಭವನದಲ್ಲಿ ಇಂದು ತಯಾರಿಸಿದ ಸಾಂಬಾರ್ ಪಾತ್ರೆಯನ್ನು ಲಿಫ್ಟ್ನಲ್ಲಿ ಸಾಗಿಸುತ್ತಿದ್ದ ವೇಳೆ ಚಿನ್ನಸ್ವಾಮಿಯವರಿಗೆ ಬಿಸಿ ಸಾಂಬಾರ್ ಬಿದ್ದು, ಗಾಯಗೊಂಡರು. ಘಟನೆ ನಡೆದಿದೆ. ಗಾಯಾಳುವನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಕೆ.ಆರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.