ರಶ್ಮಿಕಾ, ಕತ್ರಿನಾ ಬಳಿಕ ನಟಿ ಕಾಜೋಲ್​ ಗೆ ಡೀಪ್​ಫೇಕ್​ ವಿಡಿಯೋ ಕಾಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್​ ಬಳಿಕ ಇದೀಗ ಬಾಲಿವುಡ್​ ನಟಿ ಕಾಜೋಲ್​ ಅವರ ಡೀಪ್​ಫೇಕ್​ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಕ್ಯಾಮರಾ ಮುಂದೆ ಬಟ್ಟೆ ಬದಲಾಯಿಸುತ್ತಿರುವ ಮಹಿಳೆಯೊಬ್ಬರ ಮುಖಕ್ಕೆ ಕಾಜೋಲ್​ ಅವರ ಮುಖವನ್ನು ಎಡಿಟ್​ ಮಾಡಲಾಗಿದೆ. ವೈರಲ್​ ಆಗಿರುವ ವಿಡಿಯೋವನ್ನು ಫ್ಯಾಕ್ಟ್​ ಚೆಕ್​ ಮಾಡಿಸಿದ್ದು, ಅಸಲಿ ಮಹಿಳೆಯನ್ನು ಬ್ರಿಟಿಷ್​ ಸೋಷಿಯಲ್​ ಮೀಡಿಯಾ ಪ್ರಭಾವಿ ರೋಸಿ ಬ್ರೀನ್​​ ಎಂದು ಗುರುತಿಸಲಾಗಿದೆ.

ರೋಸಿ ಬ್ರೀನ್​ ಅವರು 2023ರ ಜೂನ್​ 5ರಂದು ‘ಗೆಟ್​ ರೆಡಿ ವಿತ್​ ಮಿ’ (GRWM) ಟ್ರೆಂಡ್​ನ ಭಾಗವಾಗಿ ಟಿಕ್​ ಟಾಕ್​ನಲ್ಲಿ ತಮ್ಮ ವಿಡಿಯೋವನ್ನು ಹಂಚಿಕೊಂಡಿದ್ದರು. ಸದ್ಯ ಅದೇ ವಿಡಿಯೋಗೆ ಆರ್ಟಿಫಿಶಿಯಲ್​ ಇಂಟಲಿಜೆನ್ಸ್​ (ಎಐ) ಬಳಸಿ, ರೋಸಿಯ ಮುಖಕ್ಕೆ ಕಾಜೋಲ್​ ಅವರ ಮುಖವನ್ನು ಎಡಿಟ್​ ಮಾಡಲಾಗಿದೆ.

ಇತ್ತೀಚೆಗೆ ವೈರಲ್​ ಆದ ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್ ವಿಡಿಯೋ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​, ಕೀರ್ತಿ ಸುರೇಶ್​, ಮೃಣಾಲ್​ ಠಾಕೂರ್​, ಇಶಾನ್​ ಖಟ್ಟರ್​, ನಾಗ ಚೈತನ್ಯ ಸೇರಿದಂತೆ ಅನೇಕ ತಾರೆಯರು ಆಗ್ರಹಿಸಿದ್ದರು.​

ಈ ಮಧ್ಯೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದಂತೆ ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್​ ವಿಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬಿಹಾರದ 19 ವರ್ಷದ ಯುವಕನನ್ನು ವಿಚಾರಣೆ ನಡೆಸಿದ್ದಾರೆ. ಈತನೇ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿ ಶೇರ್​ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!