ಹೊಸದಿಗಂತ ಡಿಜಿಟಲ್ ಡೆಸ್ಕ್:
ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಪೂರ್ಣಗೊಂಡಿದ್ದು, ಆದ್ರೆ ವರದಿ ಸಲ್ಲಿಸಲು ಇನ್ನೂ 15 ದಿನಗಳ ಕಾಲಾವಕಾಶ ನೀಡಬೇಕು ಎಂದು ವಾರಾಣಸಿ ನ್ಯಾಯಾಲಯಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮನವಿ ಮಾಡಿದೆ.
ಕೋರ್ಟ್ ಆದೇಶದ ಮೇರೆಗೆ ಮಸೀದಿಯಲ್ಲಿ ಆಗಸ್ಟ್ 5ರಿಂದ ವೈಜ್ಞಾನಿಕ ಸಮೀಕ್ಷೆ ಆರಂಭಿಸಲಾಗಿದ್ದು, ಸಮೀಕ್ಷೆ ಮುಗಿದಿದೆ. ಆದರೆ, ವರದಿ ಸಲ್ಲಿಸಲು ಹೆಚ್ಚಿನ ಅವಧಿ ಬೇಕು ಎಂದು ಎಎಸ್‌ಐ ಮನವಿ ಮಾಡಿಕೊಂಡಿದೆ.
ಜ್ಞಾನವಾಪಿ ಮಸೀದಿಯ ಸಮೀಕ್ಷಾ ವರದಿಯನ್ನು ವಾರಾಣಸಿ ನ್ಯಾಯಾಲಯಕ್ಕೆ ಇಂದು (ಶುಕ್ರವಾರ, ನವೆಂಬರ್ 17) ಸಲ್ಲಿಸಬೇಕಿತ್ತು. ಆದರೆ, ಈಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಹೆಚ್ಚಿನ ಕಾಲಾವಕಾಶ ಕೇಳಿದೆ.
ಜ್ಞಾನವಾಪಿ ಸಂಕೀರ್ಣದ ಎಎಸ್‌ಐ ಸಮೀಕ್ಷೆಯ ಕಾರ್ಯ ನ. 2 ರಂದು ಪೂರ್ಣಗೊಂಡಿದೆ. ಇದಾದ ಬಳಿಕ ನ್ಯಾಯಾಲಯ ವರದಿ ಸಲ್ಲಿಸಲು ನವೆಂಬರ್ 17ರವರೆಗೆ ಕಾಲಾವಕಾಶ ನೀಡಿತ್ತು. ಎಎಸ್‌ಐ ಸುಮಾರು 400 ಪುಟಗಳ ವರದಿಯನ್ನು ಸಿದ್ಧಪಡಿಸಿದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು..