ಎರಡು ತಿಂಗಳು ಹಾರ್ದಿಕ್​ ಪಾಂಡ್ಯ ಆಡುವುದು ಅನುಮಾನ: ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸರಣಿಯಿಂದಲೂ ಔಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಕಪ್​ ಲೀಗ್ ಹಂತದ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಗಾಯಕ್ಕೆ ತುತ್ತಾಗಿ. ಟೂರ್ನಿ ಯಿಂದಲೇ ಹೊರಬಿದಿದ್ದು, ಇದೀಗ ಹಾರ್ದಿಕ್​ ಚೇತರಿಕೆ ಬಗ್ಗೆ ಕೆಲ ಮಾಹಿತಿ ಬಹಿರಂಗವಾಗುತ್ತಿದ್ದು, ಪಾಂಡ್ಯ ಮುಂದಿನ ಕೆಲ ಸರಣಿಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ.

2024ರಲ್ಲಿ ಟಿ20 ವಿಶ್ವಕಪ್​ ನಡೆಯಲಿರುವ ಕಾರಣ ಎಲ್ಲ ದೇಶಗಳು ಇದರತ್ತ ಗಮನಹರಿಸುತ್ತಿದೆ. ಏಕದಿನ ವಿಶ್ವಕಪ್​ ಮುಗಿದ ಬೆನ್ನಲ್ಲೇ ಎಲ್ಲಾ ರಾಷ್ಟ್ರೀಯ ತಂಡಗಳು ಟಿ20 ಸರಣಿಗಳಿಗೆ ಸಿದ್ಧತೆ ಮಾಡಿಕೊಂಡಿದೆ.

ಆದ್ರೆ ಭಾರತ ತಂಡ ವಿಶ್ವಕಪ್​ ಆದ ನಂತರ ಆಸ್ಟ್ರೇಲಿಯಾದ ಜೊತೆಗೆ ಟಿ-20 ಸರಣಿಯನ್ನು ಆಡಲಿದೆ. ಇದು ವಿಶ್ವಕಪ್​​ಗೂ ಮುನ್ನ ಭಾರತ – ಆಸ್ಟ್ರೇಲಿಯಾದ ನಡುವೆ ನಡೆದ ಏಕದಿನ ಸರಣಿಯ ಮುಂದುವರೆದ ಭಾಗವಾಗಿದೆ. ಅಲ್ಲದೇ 2024ರ ಆರಂಭದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯಗಳನ್ನು ಆಡಲಿದೆ.

ಈ ವೇಳೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ) ಯಲ್ಲಿ ಪುನರ್ವಸತಿಯಲ್ಲಿರುವ ಪಾಂಡ್ಯ ಇನ್ನೆರಡು ತಿಂಗಳು ಆಟದಿಂದ ಹೊರಗುಳಿಯಬಹುದು ಎಂದು ಹೇಳಲಾಗಿದೆ. ಹಾರ್ದಿಕ್​ ಪಾಂಡ್ಯರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೇ ಎಂಬುದನ್ನು ವೈದ್ಯಕೀಯ ತಂಡ ಇನ್ನೂ ನಿರ್ಧರಿಸಿಲ್ಲ, ಹಾರ್ದಿಕ್​ ಬೌಲಿಂಗ್​ ಮಾಡಲು ಪ್ರಯತ್ನಸಿದ್ದು ಮತ್ತೆ ನೋವಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!