ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು 40 ಕಾರ್ಮಿಕರು ಅದರೊಳಗೆ ಸಿಲುಕಿದ್ದಾರೆ. ಏಳು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಇಂದು ಕೂಡ ಕಾರ್ಯಾಚರಣೆಗೆ ಹಿನ್ನೆಲೆಯಾಗಿದೆ.
ಈಗಾಗಲೇ 130 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಲಾಗಿದೆ, ಸುರಂಗದ ಸ್ಥಳದಲ್ಲಿ ಒಮ್ಮೆ ಭೂಕುಸಿತವೂ ಆಗಿದೆ. ಇದೀಗ ಹೈಪವರ್ ಅಗರ್ ಡ್ರಿಲ್ಲಿಂಗ್ ಮಷಿನ್ 22 ಮೀಟರ್‌ನಷ್ಟು ರಂಧ್ರ ಕೊರೆದ ನಂತರ ಹಾನಿಗೊಳಗಾಗಿದ್ದು, ರಕ್ಷಣಾ ಕಾರ್ಯ ಸ್ಥಗಿತಗೊಳಿಸಲಾಗಿದೆ.
ಇದೀಗ ಇಂದೋರ್‌ನಿಂದ ವಿಮಾನದಲ್ಲಿ ಇನ್ನೊಂದು ಮಷಿನ್ ಇಂದು ಬೆಳಗ್ಗೆ ಆಗಮಿಸಲಿದ್ದು, ಅದು ಬಂದ ನಂತರ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುತ್ತದೆ. ಸಿಲುಕಿರುವ ಕಾರ್ಮಿಕರಿಗೆ ಊಟ, ನೀರು, ಔಷಧ ನೀಡಲಾಗುತ್ತಿದೆ. ಕಾರ್ಮಿಕರು ಸಂಪರ್ಕದಲ್ಲಿದ್ದಾರೆ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Dry ration, including dry fruits, are being sent through a supply pipe to the trapped workers inside Silkayara tunnel #UttarakhandTunnelCollapse #TunnelCollapsed pic.twitter.com/iYt86HaMlB
— Gaurav Talwar (@gauravtalwarTOI) November 14, 2023