Monday, December 11, 2023

Latest Posts

CHILD CARE| ಅವಧಿಗೂ ಮುನ್ನ ಮಗು ಜನಿಸಿದರೆ ಮುನ್ನೆಚ್ಚರಿಕೆ ಕ್ರಮಗಳು ಅಗತ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಹುತೇಕ ಗರ್ಭಿಣಿಯರಿಗೆ ಅವಧಿಗೂ ಮುನ್ನವೇ ಹೆರಿಗೆಯಾಗುತ್ತದೆ. ಅಂಕಿಅಂಶಗಳ ಪ್ರಕಾರ ಸುಮಾರು 11% ಮಕ್ಕಳು ಅವಧಿಪೂರ್ವವಾಗಿ ಜನಿಸುತ್ತಾರೆ. ಅಕಾಲಿಕತೆಯ ಈ ತೊಡಕುಗಳು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಾವಿಗೆ ಸಾಮಾನ್ಯ ಕಾರಣವಾಗಿದೆ ಅಂತಾರೆ ಆರೋಗ್ಯ ತಜ್ಞರು.

ಶಿಶುಗಳು ಅಕಾಲಿಕವಾಗಿ ಹುಟ್ಟಲು ಹಲವು ಕಾರಣಗಳಿವೆ. ಐವಿಎಫ್, ಮಧುಮೇಹ, ಬಿಪಿ, ಕಲುಷಿತ ವಾತಾವರಣ, ಸೋಂಕುಗಳು, ಗರ್ಭಿಣಿಯರು ಪೌಷ್ಠಿಕ ಆಹಾರ ಸೇವಿಸದಿರುವುದು, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು, ಔಷಧ ಸೇವನೆ ಹಾಗೂ ವೈಯಕ್ತಿಕ ನೈರ್ಮಲ್ಯದ ವಿಷಯದಲ್ಲಿ ಮುಂಜಾಗ್ರತೆ ವಹಿಸದಿರುವುದರಿಂದ ಅವಧಿಪೂರ್ವ ಹೆರಿಗೆಯಾಗುವ ಸಾಧ್ಯತೆಗಳಿಗೆ ಕಾರಣಗಳು.

ಅವಧಿಗೂ ಮುನ್ನ ಜನಿಸಿದ ಮಕ್ಕಳನ್ನು ಆದಷ್ಟು ಅರೈಕೆ ಮಾಡಬೇಕು. ಈ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳು ಅಗತ್ಯ.

1. ಮಗುವಿಗೆ ಸರಿಯಾದ ತಾಪಮಾನವನ್ನು ಖಾತ್ರಿಪಡಿಸಿಕೊಳ್ಳಬೇಕು. ಮಗುವನ್ನು ಆರಾಮದಾಯಕ, ಸುರಕ್ಷಿತ ತಾಪಮಾನದಲ್ಲಿ ಇರಿಸಿಕೊಳ್ಳಲು ಕೈ ಮತ್ತು ಕಾಲುಗಳ ಮೇಲೆ ಕೈಗವಸುಗಳನ್ನು ಇಡಬೇಕು. ಮೃದುವಾದ ಕಂಬಳಿಯಿಂದ ಕವರ್ ಮಾಡಿ. ಕೋಣೆಯ ಉಷ್ಣತೆಯು ಕಡಿಮೆಯಿದ್ದರೆ, ಹೀಟರ್ ಅನ್ನು ಹಾಕಿ ಮತ್ತು ತಾಪಮಾನವನ್ನು ಕಾಪಾಡಿಕೊಳ್ಳಿ.

2. ಮಕ್ಕಳಿಗೆ ತಾಯಿಯ ಎದೆಹಾಲು ಬಹಳ ಮುಖ್ಯ.

3. ತಾಯಿಯ ಸ್ವಂತ ಹಾಲು ಲಭ್ಯವಿಲ್ಲದಿದ್ದರೆ ವೈದ್ಯರ ಸಲಹೆಯಂತೆ ಸೂಕ್ಷ್ಮ ಪೋಷಕಾಂಶಗಳು, ಕಬ್ಬಿಣದ ಪೂರಕ, ಸತು ಪೂರಕ, ವಿಟಮಿನ್ ಡಿ ಮತ್ತು ವಿಟಮಿನ್ ಎ ಪೂರಕಗಳನ್ನು ನೀಡಬಹುದು.

4. ಇಂತಹ ಶಿಶುಗಳಿಗೆ ಕಾಂಗರೂ ಮದರ್ ಕೇರ್ ವಿಧಾನವನ್ನು ತಾಯಿ ಅನುಸರಿಸಬೇಕು. ಅಂದರೆ, ಕಾಂಗರೂ ತನ್ನ ಮಗುವನ್ನು ತನ್ನ ಎದೆಗೆ ಹೇಗೆ ಅಂಟಿಕೊಳ್ಳುತ್ತದೆಯೋ ಅದೇ ವಿಧಾನ. ಮಗುವನ್ನು ಎದೆಗೆ ಮುಟ್ಟುವಂತೆ ಮಲಗಿಸಬೇಕು. ಇದು ಮಗುವಿನ ದೇಹವನ್ನು ಬೆಚ್ಚಗಾಗಿಸುತ್ತದೆ ಮತ್ತು ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

5. ಮಗುವಿಗೆ ದಿನಕ್ಕೆ ಕನಿಷ್ಠ 8 ರಿಂದ 10 ಬಾರಿ ಎದೆಹಾಲು ನೀಡಬೇಕು. ಸಮಯಕ್ಕೆ ಸರಿಯಾಗಿ ಹಾಲು ಸಿಗುವಂತೆ ನೋಡಿಕೊಳ್ಳಬೇಕು. ತಾಯಿಯ ಹಾಲು ಸಾಕಾಗದಿದ್ದರೆ, ಮುಂಚಿತವಾಗಿ ವೈದ್ಯರ ಸಲಹೆಯಂತೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕು.

6. ಸಾಮಾನ್ಯ ಶಿಶುಗಳಿಗಿಂತ ಈ ಮಕ್ಕಳು ಹೆಚ್ಚಾಗಿ ರಾತ್ರಿಯಲ್ಲಿ ಹಸಿವಿನಿಂದ ಎಚ್ಚರಗೊಳ್ಳುತ್ತವೆ. ಹಾಲುಣಿಸುವಿಕೆಯು ಆಗಾಗ್ಗೆ ಆಗಿರಬೇಕು. ಹೀಗೆ ಮಾಡಿದರೆ ಹೆಚ್ಚು ನಿದ್ದೆ ಬರುತ್ತದೆ.

7. ಸೋಂಕು ತಗಲುವ ಸಾಧ್ಯತೆ ಹೆಚ್ಚಿರುವುದರಿಂದ ಕೊಠಡಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಕೈ ತೊಳೆಯದೆ ಯಾರೂ ಮಗುವನ್ನು ಮುಟ್ಟಬಾರದು.

8. ಜನನದ ನಂತರ ಮಕ್ಕಳ ಪ್ರಯಾಣ ಅಪಾಯಕಾರಿ.

9.  ಸ್ನಾನ ಮಾಡಿಸಬೇಡಿ. ಒಣ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಮಗುವಿನ ದೇಹವನ್ನು ಒರೆಸಿ. ಯಾವುದೇ ಲೋಷನ್ ಮತ್ತು ತೈಲಗಳನ್ನು ಬಳಸದಿರುವುದು ಉತ್ತಮ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!