ಹೊಸ ದಿಗಂತ ವರದಿ, ಮೈಸೂರು:
ಬೈಕ್ನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿದ್ದು, ಘಟನೆ ವೇಳೆ ದಂಪತಿ ಬೈಕ್ನಿಂದ ಬಿದ್ದು ಗಾಯಗೊಂಡ ಘಟನೆ ಹುಣಸೂರು ತಾಲ್ಲೂಕಿನ ಹೊಸರಾಮನಹಳ್ಳಿ ಸೇತುವೆ ಬಳಿ ನಡೆದಿದೆ.
ಕುಪ್ಪೆಗಾಲ ಗ್ರಾಮದ ನಿವಾಸಿಗಳಾದ ಸೌಮ್ಯ ಮತ್ತು ಜಗದೀಶ್ ಗಾಯಗೊಂಡ ದಂಪತಿ. ಇವರು ಹಾಸನದಿಂದ ಬೈಕ್ನಲ್ಲಿ ಬರುತ್ತಿದ್ದಾಗ ಹಿಂದಿನಿoದ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಸೌಮ್ಯರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡರು. ಎಚ್ಚೆತ್ತ ಸೌಮ್ಯ ಕೂಗಿಕೊಳ್ಳುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾದರು. ಘಟನೆ ವೇಳೆ ಬೈಕ್ನಿಂದ ಬಿದ್ದು ದಂಪತಿಗೆ ಗಾಯಗೊಂಡಿದ್ದು, ಅವರಿಗೆ ಬಿಳಿಕೆರೆ ಪ್ರಾಥಮಿಕ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬoಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.