ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡಲೆಂದು ಕೇಂದ್ರ ಸರ್ಕಾರ ರೂಪಿಸಿರುವ ಪಿಎಂ ಮುದ್ರಾ ಯೋಜನೆ ಸ್ಕೀಮ್ನಲ್ಲಿ ಮಹಿಳೆಯರಿಗೆ ಹೆಚ್ಚು ಆದ್ಯತೆ ಕೊಡಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಹೇಳಿದ್ದಾರೆ.
ತಮಿಳುನಾಡಿನ ರಾಮೇಶ್ವರಂನಲ್ಲಿ ಪಿಎಂ ಸ್ವನಿಧಿ ಸೆ ಸಮೃದ್ಧಿ ಯೋಜನೆ ಅಡಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ವಿತರಣೆ ಮಾಡಿ ಮಾತನಾಡಿದ ಅವರು, ಪಿಎಂ ಮುದ್ರಾ ಯೋಜನೆಯಲ್ಲಿ ಮಹಿಳಾ ಉದ್ದಿಮೆದಾರರಿಗೆ ಹೇಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
‘ಪಿಎಂ ಮುದ್ರಾ ಯೋಜನೆಯ ಒಂದು ಪ್ರಮುಖ ಅಂಶ ಎಂದರೆ ಸಣ್ಣ ಉದ್ದಿಮೆ ನಡೆಸುತ್ತಿರುವ ಅಥವಾ ಹೊಸ ಉದ್ದಿಮೆ ಆರಂಭಿಸುವ ಆಸಕ್ತಿ ಹೊಂದಿರುವ ಮಹಿಳೆಯರು ಬ್ಯಾಂಕ್ಗೆ ಹೋಗಿ ಪಿಎಂ ಮುದ್ರಾ ಯೋಜನೆ ಅಡಿ ಸಾಲ ಪಡೆಯಬಹುದು. ಈ ಯೋಜನೆಯಲ್ಲಿ 100 ಮಂದಿ ಫಲಾನುಭವಿಗಳ ಪೈಕಿ 60 ಮಂದಿ ಮಹಿಳೆಯರಿರುತ್ತಾರೆ. ಪಿಎಂ ಮುದ್ರಾ ಸ್ಕೀಮ್ನಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.