ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ರಾಜಧಾನಿ ದೆಹಲಿಯ ಬೀದಿ ಬದಿ ಆಹಾರಕ್ಕೆ ಫಿದಾ ಆಗಿದ್ದಾರೆ. ದೆಹಲಿ ನಗರದ ರಸ್ತೆಬದಿಯ ಸ್ಟಾಲ್‌ನಲ್ಲಿ ರುಚಿಕರವಾದ ರಾಮ್ ಲಡ್ಡುವನ್ನು ಸೇವಿಸಿ, ನಿಂಬುಪಾನಿಯವನ್ನು ಸೇವಿಸಿದರು.
ಭಾನುವಾರ ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ನಡೆದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಭಾರತಕ್ಕೆ ಬಂದಿದ್ದ ಆಸ್ಟ್ರೇಲಿಯಾದ ಉಪಪ್ರಧಾನಿ ರಿಚರ್ಡ್ ದೆಹಲಿ ನಗರದ ಹಲವು ಸ್ಥಳಗಳನ್ನು ವೀಕ್ಷಿಸಿ ಹಿಂತಿರುಗಿದರು.
ಆಸ್ಟ್ರೇಲಿಯಾ ಆರನೇ ಬಾರಿಗೆ ಕ್ರಿಕೆಟ್ ವಿಶ್ವಕಪ್ ಗೆದ್ದಾಗ ಮಾರ್ಲ್ಸ್ ದೆಹಲಿಯಲ್ಲಿ ಸಂಭ್ರಮಪಟ್ಟರು. ನಿಂಬೆ ಹಣ್ಣಿನ ಜ್ಯೂಸ್ ಕುಡಿದ ರಿಚರ್ಡ್ UPI ಮೂಲಕ ಸ್ಟಾಲ್ ಮಾಲೀಕರಿಗೆ ಹಣ ಪಾವತಿಸಿದ್ದಾರೆ. ಅವರ ಜೊತೆಗಿದ್ದ ಅಧಿಕಾರಿಗಳು ನಿಂಬುಪಾನಿಗಾಗಿ ಯುಪಿಐ ಅನ್ನು ಹೇಗೆ ಬಳಸಬೇಕೆಂದು ತೋರಿಸಿದರು. ಆಸ್ಟ್ರೇಲಿಯಾದ ಉಪಪ್ರಧಾನಿ ರಿಚರ್ಡ್ ಮಾರ್ಲ್ಸ್ ನಿಂಬುಪಾನಿ ಕುಡಿದು ಯುಪಿಐ ಮೂಲಕ ಹಣ ಪಾವತಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.