Sunday, December 10, 2023

Latest Posts

ಇಷ್ಟು ಚಿಕ್ಕ ವಯಸ್ಸಿಗೆ ಈ ಪುಟ್ಟಿ ನೆಟ್ಟಿದ್ದು ಒಂದಲ್ಲಾ ಎರಡಲ್ಲಾ ಬರೋಬ್ಬರಿ 13 ಲಕ್ಷ ಗಿಡಗಳು!

  • ಮೇಘನಾ ಶೆಟ್ಟಿ ಶಿವಮೊಗ್ಗ

ನಾನು ದೊಡ್ಡವಳಾದ ಮೇಲೆ ಡಾಕ್ಟರ್ ಆಗ್ತೇನೆ, ಇಂಜಿನಿಯರ್ ಆಗ್ತೇನೆ, ಮಾಡೆಲ್ ಆಗ್ತೇನೆ ಎಂದೆಲ್ಲಾ ಕನಸು ಕಂಡಿರಬಹುದು ಆದರೆ ಈ ಪುಟಾಣಿಗೆ ಸಣ್ಣ ವಯಸ್ಸಿನಿಂದಲೂ ಗಿಡಗಳನ್ನು ಬೆಳೆಸಿ, ಭೂಮಿತಾಯಿಯನ್ನು ನಗಿಸುವ ಆಸೆ.

ಹೌದು, ಇದು ಆಫ್ರಿಕಾದ ಟ್ರೀ ಗರ್ಲ್ ಎಲೇನ್ ವಾಂಜಿಕು ಕ್ಲಿಸ್ತುನ್ ಕಥೆ, ಕೀನ್ಯಾದಲ್ಲಿ ವಾಸಿಸುವ ಎಲೇನ್‌ಗೆ ನಾಲ್ಕು ವರ್ಷವಿದ್ದಾಗಿನಿಂದಲೂ ಮರಗಿಡಗಳ ಮೇಲೆ ಎಲ್ಲಿಲ್ಲದ ಆಸಕ್ತಿ.

ಗಿಡಮರಗಳನ್ನು ಕಡಿಯುತ್ತಾ ಬಂದರೆ ಮರಗಳ ಕೊರತೆಯಿಂದ ಜೀವನ ಅಲ್ಲೋಲ ಕಲ್ಲೋಲ ಆಗುತ್ತದೆ ಅನ್ನೋದನ್ನು ಎಲೇನ್ ನಾಲ್ಕು ವರ್ಷದಲ್ಲೇ ಅರಿತಿದ್ದಳು. ನಾಲ್ಕು ವರ್ಷದವಳಿಂದಲೇ ಆಕೆ ಗಿಡ ನೆಡಲು ಆರಂಭಿಸಿದ್ದಳು.

Africa's Youngest Climate Change Ambassador's Journey - UrbanBetterನಮ್ಮ ಸುತ್ತಮುತ್ತಲೇ ಸಾಕಷ್ಟು ಮರಗಳನ್ನು ಕಡಿದು ಹಾಕಿದ್ದಾರೆ ಇದರಿಂದ ಪ್ರಕೃತಿಗೆ ಕೋಪ ಬರುತ್ತದೆ, ಪ್ರಾಣಿಗಳಿಗೆ ಮನೆ ಇಲ್ಲದಂತಾಗುತ್ತದೆ, ಮರ ಕಡಿಯುವವರನ್ನು ತಡೆಯಲು ಆಗದು, ಆದರೆ ಹೊಸ ಗಿಡಗಳನ್ನು ನೆಟ್ಟು ಮರಗಳನ್ನಾಗಿ ಬೆಳೆಸೋದು ನಮ್ಮೆಲ್ಲರ ಜವಾಬ್ದಾರಿ ಎಂದು ಎಲೇನ್ ಹೇಳಿದ್ದಾರೆ.

ವಿಶ್ವದಲ್ಲಿ ಒಂದು ನಿಮಿಷಕ್ಕೆ ಎರಡು ಸಾವಿರ ಮರಗಳನ್ನು ಕಡಿಯಲಾಗುತ್ತದೆ. ಇದು ಗ್ಲೋಬಲ್ ವಾರ್ಮಿಂಗ್‌ಗೆ ಮಹತ್ತರ ಕಾರಣವಾಗುತ್ತದೆ, ಇದು ಪ್ರಾಣಿಪಕ್ಷಿಗಳಿಗಷ್ಟೇ ಅಲ್ಲ, ನಮ್ಮ ಆರೋಗ್ಯಕ್ಕೆ ಕೆಟ್ಟದ್ದು ಅನ್ನೋದನ್ನು ಗಮನಿಸಬೇಕಿದೆ.

Kenya forests: over 14,000 hectares reforested under 10 years, thanks to African Development Bank | African Development Bank Group - Making a Differenceಈ ಬಗ್ಗೆ ಎಲ್ಲಾ ತಿಳಿದ ನಂತರ ಎಲೇನ್ ಒಂದು ದಿನ ಮನೆಯ ಮುಂದೆ ಕೈಯಿಂದ ಪುಟ್ಟ ಗುಂಡಿಯೊಂದನ್ನು ತೋಡಿ ಗಿಡವನ್ನು ನೆಟ್ಟು ನೀರುಣಿಸಿದ್ದಳು, ಇದನ್ನು ಗಮನಿಸಿದ ಪೋಷಕರು ಆಕೆಗೆ ಎಲ್ಲಾ ರೀತಿ ಸಹಾಯ ಮಾಡಿದರು.

Cost of deforestation in Kenya far exceeds gains from forestry and logging, UN joint study finds | UN Newsನಾನೇನು ದೊಡ್ಡದು ಮಾಡಿಲ್ಲ, ನನ್ನ ಜಗತ್ತನ್ನು ಕಾಪಾಡೋದಕ್ಕೆ ಸಣ್ಣ ಪ್ರಯತ್ನ ಮಾಡ್ತಿದ್ದೇನೆ, 9 ವರ್ಷಗಳಿಂದ ಒಂದಾದ ಮೇಲೊಂದು ಗಿಡಗಳನ್ನು ನೆಡುತ್ತಲೇ ಇದ್ದೇನೆ, ನಾನೇ ನೆಟ್ಟ ಗಿಡಗಳು ಇದೀಗ ಮರಗಳಾಗಿ ನನಗೇ ನೆರಳು ನೀಡ್ತಿವೆ ಎಂದು ಎಲಿಯಾನ್ ಹೇಳ್ತಾರೆ.

ಎಲಿಯಾನ್ ಪ್ರಯತ್ನವನ್ನು ಎಲ್ಲರೂ ಮೆಚ್ಚಿದ್ದಾರೆ, ಕಾನ್ಫರೆನ್ಸ್, ಅವಾರ್ಡ್ಸ್ ನಂತರ ಇದೀಗ ಎಲಿಯಾನ್ ತನ್ನದೇ ನಾನ್ ಪ್ರಾಫಿಟ್ ಆರ್ಗನೈಸೇಷನ್ ನಡೆಸುತ್ತಿದ್ದಾರೆ. ಚಿಲ್ಡ್ರನ್ ವಿತ್ ನೇಚರ್ ಆರ್ಗನೈಸೇಷನ್‌ನ ಸಿಇಒ ನಾನು ಎಂದು ಹೆಮ್ಮೆಯಿಂದ ಎಲಿಯಾನ್ ತಲೆಯೆತ್ತಿದ್ದಾರೆ.

8 year old Ellyanne Wanjiku has Planted over 400 Trees #K24WeekendEdition - YouTubeಇಷ್ಟೆಲ್ಲಾ ಸಾಧನೆ ಮಾಡಿರುವ ಎಲಿಯಾನ್‌ಗೆ ಕೇವಲ 13 ವರ್ಷ! 13 ವರ್ಷಕ್ಕೇ 13 ಲಕ್ಷ ಮರಗಳನ್ನು ಎಲಿಯಾನ್ ಬೆಳೆಸಿದ್ದಾರೆ, ನಮಗೆ ಜೀವನ ನೀಡಿರುವ ಈ ಪ್ರಕೃತಿಗಾಗಿ ನಾವೂ ಒಂದೆರಡು ಗಿಡ ಬೆಳೆಸಬಹುದಲ್ವಾ?

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!