ದಿನಭವಿಷ್ಯ| ವ್ಯವಹಾರದಲ್ಲಿ ಉತ್ತಮ ಫಲ ಪಡೆಯಲು ಹೊಂದಾಣಿಕೆಯ ತಂತ್ರ ಯೋಚಿಸಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಹೆಚ್ಚುವರಿ ಹೊಣೆಗಾರಿಕೆ ನಿಮ್ಮ ಮೇಲಿನ ಒತ್ತಡ ಹೆಚ್ಚಿಸುವುದು. ಅನಿರೀಕ್ಷಿತವಾಗಿ ಆಪ್ತ ಬಂಧುಗಳ ಭೇಟಿ. ಕೌಟುಂಬಿಕ ಸಮಸ್ಯೆ ಪರಿಹಾರ, ನೆಮ್ಮದಿ.

ವೃಷಭ
ವೃತ್ತಿಯಲ್ಲಿ ತೀವ್ರ ಸ್ಪರ್ಧೆ ಎದುರಿಸುವಿರಿ. ಆದರೆ ನಿಮಗೇ ಒಳಿತಾಗಲಿದೆ. ಆರೋಗ್ಯದ ಕುರಿತು ಗಮನ ಕೊಡಿ. ಸಣ್ಣಪುಟ್ಟ ಅಸೌಖ್ಯ ಕಾಡಬಹುದು. ಆರ್ಥಿಕ ವ್ಯಯ.

ಮಿಥುನ
ದಂಪತಿ ಮಧ್ಯೆ ಮನಸ್ತಾಪ ಸಂಭವ. ಅದನ್ನು ಪರಿಹರಿಸಲು ಆದ್ಯತೆ ಕೊಡಬೇಕು. ಸಮಸ್ಯೆಗಳಿಗೆ ಕಣ್ಣು ಮುಚ್ಚಿ ಕೂರದಿರಿ. ಅದನ್ನು ನಿಭಾಯಿಸಿರಿ.

ಕಟಕ
ನಿಮ್ಮ ನೇರ ನಡೆನುಡಿ ಕೆಲವರ ಮನಸ್ತಾಪ ಕಟ್ಟಿಕೊಳ್ಳುವಂತೆ ಮಾಡಬಹುದು. ಕೆಲವು ವಿಷಯಗಳಲ್ಲಿ ಹೊಂದಾಣಿಕೆಯ ಸ್ವಭಾವ ಒಳಿತು.

ಸಿಂಹ
ನಿಮ್ಮ ನಡೆನುಡಿ ಇತರರು ನಿಮಗೆ ಗೌರವ ನೀಡಲು ಕಾರಣವಾಗುವುದು. ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಆರ್ಥಿಕ ಲಾಭ ಸಿಗಲಿದೆ. ಸಹೋದ್ಯೋಗಿಗಳನ್ನು ಕಡೆಗಣಿಸಬೇಡಿ.

ಕನ್ಯಾ
ನಿಮ್ಮ ನಾಯಕತ್ವ ಗುಣವು ಇತರರ ಗಮನ ಸೆಳೆಯುವುದು. ಕುಟುಂಬದ ಜತೆ ಹೆಚ್ಚು ಭಾವನಾತ್ಮಕ ಬಂಧ ಸಾಧಿಸಿರಿ. ಅವರ ಹಿತಾಸಕ್ತಿ ಗಮನಿಸಿ.

ತುಲಾ
ಭಾವನಾತ್ಮಕ ಏರುಪೇರು. ವ್ಯವಹಾರದಲ್ಲಿ  ಉತ್ತಮ ಫಲ ಪಡೆಯಲು ಹೊಂದಾಣಿಕೆಯ ತಂತ್ರ ಯೋಚಿಸಿ. ಪ್ರತಿಸ್ಪರ್ಧೆಗೆ ಇಳಿಯದಿರಿ.

ವೃಶ್ಚಿಕ
ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಕಾಲ ಸೂಕ್ತವಾಗಿದೆ. ನಿಮಗೆ ಒಳಿತು ತರುವ ಸೂಚನೆಗಳು ಕಾಣುತ್ತಿವೆ. ಕೆಲ ವಿಷಯಗಳಲ್ಲಿ ಖರ್ಚು ಹೆಚ್ಚಬಹುದು.

ಧನು
ಉದ್ಯೋಗದಲ್ಲಿ ರಿಸ್ಕ್ ತೆಗೆದುಕೊಳ್ಳಲು ಹೋಗಬೇಡಿ. ಸಹನೆಯಿಂದ ವರ್ತಿಸಿ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವ ಸಂಕೇತ ತೋರುವುದು.

ಮಕರ
ಇಂದು ನಿಮ್ಮ ಬದುಕಲ್ಲಿ ಹಲವಾರು ಬದಲಾವಣೆ ಉಂಟಾಗಬಹುದು. ವೃತ್ತಿಯಲ್ಲಿ, ಕೌಟುಂಬಿಕವಾಗಿ, ಆರೋಗ್ಯದಲ್ಲಿ  ಶುಭ ಬೆಳವಣಿಗೆಗಳು.

ಕುಂಭ
ವೃತ್ತಿಯ ಒತ್ತಡವು ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಹಾಗಾಗಿ ಸಹನೆಯಿಂದ ಕಾರ್ಯಾಚರಿಸಿ. ಉದ್ವಿಗ್ನಗೊಳ್ಳದಿರಿ.

ಮೀನ
ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಲು ಕಲಿಯಬೇಕು. ಅದಕ್ಕೆ ವಿರುದ್ಧವಾಗಿ ಕಾರ್ಯ ಎಸಗುವ ಪ್ರಯತ್ನವು ಫಲ ನೀಡದು. ಸಹನೆಯಿರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!