ಹೊಸದಿಗಂತ ವರದಿ, ಮಂಗಳೂರು:
ಜಾತಿ ಗಣತಿ ಬಗ್ಗೆ ಬಿಜೆಪಿಯ ವಿರೋಧವಿಲ್ಲ. ಆದರೆ, ಕಾಂತರಾಜು ವರದಿಯನ್ನು ಸಮರ್ಪಕವಾಗಿ ತಯಾರಿಸಿಲ್ಲ ಎಂಬ ಆರೋಪವಿದೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬುಧವಾರ ಮಂಗಳೂರಿಗೆ ಮೊದಲ ಭೇಟಿ ನೀಡಿದ ಅವರು, ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಿದ್ದರಾಮಯ್ಯ ಅವರು ತಮ್ಮ ಈ ಹಿಂದಿನ ಅವಯಲ್ಲೇ ಕಾಂತರಾಜು ವರದಿ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ. ಈಗ ಲೋಕಸಭಾ ಚುನಾವಣೆ ದೃಷ್ಟಿಯಿಂದ ಜಾತಿಗಣತಿ ಹೆಸರಿನಲ್ಲಿ ರಾಜಕೀಯ ನಡೆಸುವುದು ಸರಿಯಲ್ಲ ಎಂದು ಹೇಳಿದರು.