ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಾಂತ್ಯದೊಳಗೆ ಅರ್ಹ ಎಲ್ಲರಿಗೆ ‘ಗ್ಯಾರಂಟಿ’ಗಳನ್ನು ಖಾತರಿಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಪ್ರತ್ಯೇಕ ಸಭೆ ಬುಧವಾರ ನಡೆಸಿದರು.
ಈ ವೇಳೆ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಶಕ್ತಿ, ಗೃಹಜ್ಯೋತಿ, ಅನ್ಯಭಾಗ್ಯ ಹಾಗೂ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲಿಸಿದರು.
ಬಡವರ ಪರ ಯೋಜನೆಗಳ ಬಗ್ಗೆ ಟೀಕೆ-ಟಿಪ್ಪಣಿಗಳು ಸಹಜ. ಪ್ರತಿಪಕ್ಷಗಳು, ವಿವಿಧ ಸಮುದಾಯಗಳು ಅಭಿಪ್ರಾಯಗಳನ್ನು ಪರಿಗಣಿಸಬೇಕು. ಎಲ್ಲ ಅರ್ಹರಿಗೆ ಗ್ಯಾರಂಟಿಗಳ ಲ ಲಭಿಸುತ್ತಿಲ್ಲ.ಆದರೆ ಆರು ತಿಂಗಳ ಅನನ್ಯ ಸಾಧನೆ ಎಂದು ಸರ್ಕಾರ ಅಬ್ಬರದ ಪ್ರಚಾರ ಪಡೆಯುತ್ತಿದೆ ಎಂಬ ದೂರನ್ನು ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿ, ಆಯಾ ಇಲಾಖೆ ಸಚಿವರು ಮತ್ತು ಉನ್ನತಾಧಿಕಾರಿಗಳಿಂದ ಮಾಹಿತಿ ಪಡೆದರು.
ಅನ್ನಭಾಗ್ಯ ಯೋಜನೆ
ಅನ್ನಭಾಗ್ಯ ಯೋಜನೆಯಡಿ 7.67 ಲಕ್ಷ ಪಡಿತರ ಚೀಟಿದಾರರು ತಾಂತ್ರಿಕ ಸಮಸ್ಯೆಗಳಿಂದಾಗಿ ಅನರ್ಹರ ವ್ಯಾಪ್ತಿಗೆ ಸೇರಿಬಿಟ್ಟಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಮನೆ ಯಜಮಾನರು ಊರಿನಲ್ಲಿ ಇಲ್ಲದ ಕಾರಣ ಸಮಸ್ಯೆಯಾಗಿದೆ ಎಂದು ಸಭೆ ಗಮನಸೆಳೆಯಲಾಯಿತು.
ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಮನೆಯ ಎರಡನೇ ಹಿರಿಯ ವ್ಯಕ್ತಿ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು ಕುರಿತಂತೆ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಬೇಕು ಎಂದು ಸೂಚಿಸಿದರು.
ಗೃಹಲಕ್ಷ್ಮಿ
ಗೃಹಲಕ್ಷ್ಮಿ ಯೋಜನೆಯಡಿ ನವೆಂಬರ್ವರೆಗೆ 1.17 ಕೋಟಿ ಲಾನುಭವಿಗಳ ನೋಂದಣಿ, 1.10 ಕೋಟಿ ರೂ. ಲಾನುಭವಿಗಳಿಗೆ ನೆರವು ವರ್ಗಾವಣೆಯಾಗಿದೆ. ಎರಡು ಲಕ್ಷ ಲಾನುಭವಿಗಳ ತಾಂತ್ರಿಕ ತೊಡಕು ನಿವಾರಣೆಗೆ ಪ್ರಯತ್ನಿಸಲಾಗುತ್ತಿದೆ.ಖಾತೆ ಮಾಹಿತಿ ಗೊಂದಲ, ಆಧಾರ್ ಲಿಂಕ್ ಆಗದಿರುವುದು ಇತ್ಯಾದಿ ಸಮಸ್ಯೆಗಳಿರುವ ಕಾರಣ ಲಾನುಭವಿಗಳನ್ನು ಅಂಗನವಾಡಿ ಕಾರ್ಯಕರ್ತರು ಬ್ಯಾಂಕ್ಗೆ ಕರೆದೊಯ್ದು ಬಗೆಹರಿಸುತ್ತಿದ್ದಾರೆ ಎಂದು ವಿವರಿಸಿದಾಗ ಗ್ರಾ.ಪಂ.ಮಟ್ಟದಲ್ಲಿ ಗೃಹಲಕ್ಷ್ಮಿ ಅದಾಲತ್ ಆಯೋಜಿಸಿ ಸಮಸ್ಯೆ ಇತ್ಯರ್ಥಕ್ಕೆ ಸಿಎಂ ಸಿಎಂ ಸಿದ್ದರಾಮಯ್ಯ ಹೇಳಿದರು.
ಶಕ್ತಿ ಯೋಜನೆ
ಶಕ್ತಿ ಯೋಜನೆಯಡಿ ನ.21ರವರೆಗೆ 99.75 ಕೋಟಿ ರೂ. ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಸಾರಿಗೆ ಸೌಲಭ್ಯ ಪಡೆದಿದ್ದು, ಇನ್ನೆರಡು ದಿನಗಳಲ್ಲಿ ಶತ ಕೋಟಿ ದಾಟಲಿದೆ.ಮಾಸಿಕ ಪ್ರಯಾಣಿಕರ ಸಂಖ್ಯೆ ಏಪ್ರಿಲ್ನಲ್ಲಿ 84.17 ಲಕ್ಷದಷ್ಟಿತ್ತು. ಶಕ್ತಿ ಯೋಜನೆ ಜಾರಿ ನಂತರ 1.08 ಕೋಟಿಯಿಂದ 1.15 ಕೋಟಿಗೆ ಏರಿಕೆಯಾಗಿದೆ.
ನಾಲ್ಕು ಸಾರಿಗೆ ನಿಗಮಗಳಿಗೆ ಒಟ್ಟು 828 ಸಾಮಾನ್ಯ, 145 ವಿದ್ಯುತ್ ಚಾಲಿತ ಬಸ್ಗಳನ್ನು ಸೇರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು. ಕಾಲಮಿತಿಯೊಳಗೆ ಹೊಸ ಬಸ್ಗಳ ಖರೀದಿ ಪೂರ್ಣಗೊಳಿಸಲು ಸಿದ್ದರಾಮಯ್ಯ ಸೂಚಿಸಿದರು.
ಗೃಹ ಜ್ಯೋತಿ
ಗೃಹ ಜ್ಯೋತಿ ಯೋಜನೆಯಡಿ ಆಗಸ್ಟ್ನಿಂದ ಈವರೆಗೆ 2,900 ಕೋಟಿ ರೂ. ಭರಿಸಲಾಗಿದೆ. ಯೋಜನೆಯಡಿಗೆ 1.62 ಕೋಟಿ ಗ್ರಾಹಕರು ಹೆಸರು ನೋಂದಾಯಿಸಿಕೊಂಡಿದ್ದರೆ, 1.50 ಕೋಟಿ ಕುಟುಂಬಗಳಿಗೆ ಯೋಜನೆಯ ಸೌಲಭ್ಯ ದೊರೆಯುತ್ತಿದೆ.
ಕುಟೀರ ಜ್ಯೋತಿ, ಭಾಗ್ಯಜ್ಯೋತಿ ಮತ್ತು ಅಮೃತ ಜ್ಯೋತಿ ಲಾನುಭವಿಗಳನ್ನು ಇಲಾಖೆಯ ದತ್ತಾಂಶದಲ್ಲಿ ಸೇರಿಸಲಾಗಿದೆ. ಯಾರೊಬ್ಬರೂ ಈ ಸೌಲಭ್ಯದಿಂದ ಬಿಟ್ಟು ಹೋಗಬಾರದು ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಆಗಿ ಹೇಳಿದರು.