ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ಜೋಳ
ಕ್ಯಾರೆಟ್
ಟೊಮೆಟೊ
ಈರುಳ್ಳಿ
ಬೆಳ್ಳುಳ್ಳಿ
ಚಕ್ಕೆ
ಲವಂಗ
ಹಾಲು
ಮಾಡುವ ವಿಧಾನ:
ಮೊದಲು ಜೋಳ, ಕ್ಯಾರೆಟ್, ಟೊಮೆಟೊ ಇವುಗಳನ್ನು ಚೆನ್ನಾಗಿ ತೊಳೆದು ಸ್ವಲ್ಪ ನೀರು ಹಾಕಿ ಬೇಯಿಸಬೇಕು. ನಂತರ ಒಂದು ಪಾತ್ರೆಯಲ್ಲಿ ಚೆಕ್ಕೆ, ಲವಂಗ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಂದು ಚಮಚ ಬೆಣ್ಣೆ ಹಾಕಿ ಹುರಿದುಕೊಳ್ಳಬೇಕು. ಈಗ ಬೇಯಿಸಿದ ತರಕಾರಿಗಳನ್ನು, ಹುರಿದ ಮಸಾಲೆಯೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದಕ್ಕೆ ಹಾಲು ಮತ್ತು ಸೂಪ್ ಗೆ ತಕ್ಕ ನೀರು ಹಾಕಿ ಕುದಿಸಬೇಕು. ಬಿಸಿ ಬಿಸಿಯಾದ ಸೂಪ್ ಗೆ ಒಂದು ಚಮಚ ಬೆಣ್ಣೆ, ಕಾಳು ಮೆಣಸಿನ ಪುಡಿ, ಉಪ್ಪನ್ನು ಸೇರಿಸಿದರೆ ಆರೋಗ್ಯಕರ ಜೋಳದ ಸೂಪ್ ರೆಡಿ.