ನವೆಂಬರ್‌ 26ರಂದು ಬೆಂಗಳೂರಿನಲ್ಲಿ ʼನಾರಿ ಶಕ್ತಿ ಸಂಗಮʼ ಮಹಿಳಾ ಸಮಾವೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಮರ್ಥ ಭಾರತ ವತಿಯಿಂದ ನವೆಂಬರ್ 26 ರಂದು ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ʼನಾರಿ ಶಕ್ತಿ ಸಂಗಮʼ ಮಹಿಳಾ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಬೆಳಗ್ಗೆ 9 ಗಂಟೆಗೆ ಸಮಾವೇಶ ಪ್ರಾರಂಭವಾಗಲಿದೆ. ಸಂಸ್ಕೃತ ಹಾಗೂ ಇಂಡಾಲಜಿ ತಜ್ಞರು, ವಿಭು ಅಕಾಡೆಮಿಯ ಸ್ಥಾಪಕರು ಹಾಗೂ ಅಧ್ಯಕ್ಷರು ಡಾ. ಆರತಿ ವಿ.ಬಿ ಕಾರ್ಯಕ್ರಮವನ್ನು ಉದ್ಘಾಟಿಸಿ ʼಭಾರತೀಯ ಚಿಂತನೆಯಲ್ಲಿ ಮಹಿಳೆʼ ಎಂಬ ವಿಷಯದ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಲಿದ್ದಾರೆ. ಈ ಸಮ್ಮೇಳನದ ಅಧ್ಯಕ್ಷತೆಯನ್ನು ಡಾ.ವಿಜಯಲಕ್ಷ್ಮಿ ದೇಶಮಾನೆ, ಉಪಾಧ್ಯಕ್ಷತೆಯನ್ನು ಡಾ.ಎಲ್‌ ಗೋಮತೀದೇವಿ ವಹಿಸಲಿದ್ದಾರೆ.

ಬೆಳಗ್ಗೆ 10:30ಕ್ಕೆ ʼಸ್ಥಾನೀಯ ಮಹಿಳೆಯರ ಸ್ಥಿತಿ, ಸವಾಲುಗಳು ಹಾಗೂ ಪರಿಹಾರʼ ಎಂಬ ವಿಷಯದ ಕುರಿತು ಚರ್ಚಾಗೋಷ್ಠಿ ನಡೆಯಲಿದೆ. ಸಮ್ಮೇಳನದ ಸಮಾರೋಪ ಮಧ್ಯಾಹ್ನ 12:15ಕ್ಕೆ ʼಆಧುನಿಕ ಭಾರತದ ವಿಕಾಸದಲ್ಲಿ ಮಹಿಳೆಯರ ಪಾತ್ರʼ ಎಂಬ ವಿಷಯಾಧಾರಿತವಾಗಿ ನಡೆಯುತ್ತದೆ.

ಈ ಸಮ್ಮೇಳನವು ಸಮಾಜದ ಬಗ್ಗೆ ಕಳಕಳಿಯಿರುವ ಮಹಿಳೆಯರ ಏಕತ್ರೀಕರಣ, ವಿವಿಧ ವೃತ್ತಿಯಲ್ಲಿ ರುವ ಮಹಿಳೆಯರಿಗೆ ಸಮಾಜಮುಖಿ ದೃಷ್ಟಿ ನೀಡುವುದು, ತಮ್ಮ ಆಸಕ್ತಿ ಕ್ಷೇತ್ರದಲ್ಲಿ ಸಮಾಜಸೇವೆಯ ಅವಕಾಶವನ್ನು ಕಲ್ಪಿಸುವ ದೃಷ್ಟಿಯಿಂದ ಆಯೋಜಿಸಲಾಗಿದೆ. ಸುಮಾರು 2000 ಮಹಿಳೆಯರು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮದಲ್ಲಿ ಸಾಮಾಜಿಕ ಹಾಗೂ ರಾಷ್ಟ್ರೀಯ ವಿಚಾರಗಳ ಮಂಥನ, ಪರ್ಯಾವರಣ ಸಂರಕ್ಷಣೆ ಮುಂತಾದ ಚಟುವಟಿಕೆಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ. ಸಮಾವೇಶದಲ್ಲಿ ಭಾರತ ಮಹಿಳಾ ಸಾಧಕಿಯರ ಪರಿಚಯಾತ್ಮಕ ಪ್ರದರ್ಶಿನಿ, ರಾಷ್ಟ್ರೀಯ ಸಾಹಿತ್ಯ ಮಳಿಗೆ, ವನವಾಸಿ, ಗೋ ಉತ್ಪನ್ನ ಹಾಗೂ ಸ್ವದೇಶಿ ಮಳಿಗೆಗಳು ಇರಲಿವೆ ಎಂದು ಸಮರ್ಥ ಭಾರತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!