ನಕಲಿ ಟಿಕೆಟ್ ತೋರಿಸಿ ಏರ್‌ಪೋರ್ಟ್ ಒಳಗೆ ಪ್ರವೇಶಿಸಿದ ಮಹಿಳೆ, ಎಫ್‍ಐಆರ್ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಿಳೆಯೊಬ್ಬಳು ನಕಲಿ ಟಿಕೆಟ್ ತೋರಿಸಿ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದ ಘಟನೆ ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಸ್ನೇಹಿತನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಲು ಮಹಿಳೆಯೊಬ್ಬರು ನಕಲಿ ಟಿಕೆಟ್ ಪಡೆದು ಟರ್ಮಿನಲ್ ಪ್ರವೇಶಿಸಿ ಹೊರಬರುವಾಗ ಸಿಕ್ಕಿಬಿದ್ದಿದ್ದಾರೆ.

ಅಕ್ರಮವಾಗಿ ವಿಮಾನ ನಿಲ್ದಾಣ ಪ್ರವೇಶಿಸಿರುವ ಮಹಿಳೆ ಹರ್ಷಿತ್ ಕೌರ್. ಆಯುಶ್ ಶರ್ಮಾ ಎಂಬ ಸ್ನೇಹಿತನನ್ನು ಏರ್ ಪೋರ್ಟ್ ಗೆ ಡ್ರಾಪ್ ಮಾಡಲು ಬಂದಿದ್ದ ಮಹಿಳೆ ಟಿಕೆಟ್ ಇಲ್ಲದಿದ್ದರೆ ಟರ್ಮಿನಲ್ ಒಳಗೆ ಬಿಡುವುದಿಲ್ಲ ಎಂಬ ಕಾರಣಕ್ಕೆ ನಕಲಿ ಇ-ಟಿಕೆಟ್ ತಯಾರಿಸಿ ಟರ್ಮಿನಲ್ ಪ್ರವೇಶಿಸಿದ್ದಾಳೆ. ಬಳಿಕ ಲ್ಯಾಪ್‌ಟಾಪ್‌ ಕಳೆದಿದೆ ಎಂದು ಹೊರನಡೆಯಲು ಪ್ರಯತ್ನಿಸಿದ್ದಾಳೆ.

ಈ ವೇಳೆ ಅನುಮಾನಗೊಂಡ ಸಿಬ್ಬಂದಿ ಟಿಕೆಟ್ ಪರಿಶೀಲನೆ ನಡೆಸಿದಾಗ ನಕಲಿ ಟಿಕೆಟ್ ಎಂಬುದು ಬೆಳಕಿಗೆ ಬಂದಿದೆ. ಭದ್ರತಾ ಸಿಬ್ಬಂದಿ ದೂರಿನ ಮೇರೆಗೆ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ (Police) ಠಾಣೆಯಲ್ಲಿ ಎಫ್‍ಐಆರ್ (FIR) ದಾಖಲಾಗಿದೆ. ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!