ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೂ ಚುನಾವಣಾ ಫಲಿತಾಂಶ ಹೊರಬಿದ್ದಿಲ್ಲ, ಆದರೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಗೆಲುವು ಘೋಷಿಸಿಕೊಂಡು ಅಚ್ಚರಿ ಮೂಡಿಸಿದೆ.
ಭೋಪಾಲ್‌ನ ತನ್ನ ಕಚೇರಿಯ ಮುಂಭಾಗ ಪೋಸ್ಟರ್ ಅಳವಡಿಸಿರುವ ಕಾಂಗ್ರೆಸ್, ‘ಮುಖ್ಯಮಂತ್ರಿಯಾದ ಗೌರವಾನ್ವಿತ ಕಮಲ್‌ನಾಥ್ ಅವರಿಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದೆ. ಇದರಲ್ಲಿ ಕಮಲ್‌ನಾಥ್, ಮುಖ್ಯಮಂತ್ರಿಯಾಗಿ ಅಭಿನಂದನೆ ಸ್ವೀಕರಿಸುತ್ತಿರುವ ಮಾದರಿಯ ಫೋಟೋ ಕೂಡಾ ಬಳಸಿಕೊಳ್ಳಲಾಗಿದೆ.
ಈ ನಡುವೆ ಪತ್ರಕರ್ತರೊಂದಿಗೆ ಮಾತನಾಡಿದ ಅಭ್ಯರ್ಥಿ ಕಮಲ್‌ನಾಥ್, ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದ್ದರೂ, ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ ಮತೆಣಿಕೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ನಿಂದ ಮತ್ತಷ್ಟು ಮುನ್ನಡೆ ಸಾಧಿಸುತ್ತಿದೆ.