ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣಾ ಫಲಿತಾಂಶ ಹೊರಬೀಳುವುದಕ್ಕೂ ಮುನ್ನವೇ ಕಾಂಗ್ರೆಸ್ ವಿಜಯೋತ್ಸವದ ಸಿದ್ಧತೆ ಮಾಡಿಕೊಂಡಿದೆ.
ದಿಲ್ಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆಗೆ ಭಾರೀ ಸಿದ್ಧತೆ ಕಂಡುಬಂದಿದ್ದು, ವಿಜಯದ ಸಂಭ್ರಮದಲ್ಲಿ ಹಂಚಲು ಸಿಹಿ ತಿಂಡಿ ಲಡ್ಡುಗಳನ್ನು ತಂದಿಡಲಾಗಿದೆ. ಆದರೆ ಸದ್ಯದ ಮತ ಎಣಿಕೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಚತ್ತೀಸ್ಗಡದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.