ಹೊಸದಿಗಂತ ವರದಿ ಮಂಗಳೂರು :
ಸೇವಾ ಸಂಗಮ ಟ್ರಸ್ಟ್‌ನ ಮಹಿಳಾ ಸಮನ್ವಯ ಸಮಿತಿ ಸಾರಥ್ಯದಲ್ಲಿ ಭಾನುವಾರ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆದ ನಾರಿ ಶಕ್ತಿ ಸಂಗಮ ಕಾರ್ಯಕ್ರಮ ಹಲವು ವಿಶಿಷ್ಟತೆ ಮೂಲಕ ಎಲ್ಲರ ಗಮನಸೆಳೆಯಿತು.
ಉಪಹಾರದ ಬಳಿಕ ಮುಖ್ಯ ವೇದಿಕೆಯಲ್ಲಿ ಮಹಿಳೆಯರಿಂದ ವೀಣಾ ವಾದನ ನಡೆಯಿತು. ಜೊತೆಯಾಗಿ ರಾಷ್ಟ್ರ ರಾಜ್ಯ ಮತ್ತು ಉಡುಪಿ ಜಿಲ್ಲೆಯ ಸುಮಾರು 100 ಸಾಧಕ ಮಹಿಳೆಯರ ಬಗೆಗಿನ ವಿವರಗಳನ್ನು ಒಳಗೊಂಡ ಎಲ್ಇಡಿ ಪ್ರದರ್ಶನ ಮಾಡಲಾಯಿತು. ಬಳಿಕ ಮಾಹೆಯ ಯೋಗ ವಿಭಾಗದ ಮುಖ್ಯಸ್ಥೆ ಡಾಕ್ಟರ್ ಅನ್ನಪೂರ್ಣ ಕೆ. ಆಚಾರ್ಯ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಮನೆಯಿಂದಲೇ ಸಂಸ್ಕಾರ ಸಂಸ್ಕೃತಿಯ ಕುರಿತಾದ ಅರಿವು ಜಾಗೃತಿ ಆರಂಭವಾಗಲಿ ಆಹಾರ ಆಲೋಚನೆ ಮತ್ತು ಅನುಕ್ರಮಣಿಕೆ ಬಹಳ ಮುಖ್ಯ ಅಂದರೆ ಏನನ್ನು ಯಾವಾಗ ಎಲ್ಲಿ ಮತ್ತು ಹೇಗೆ ಮಾಡಿದರೆ ಒಳಿತು ಎಂಬುದನ್ನು ಆಕೆ ಬಹಳ ಎಚ್ಚರ ದಿಂದ ನಿಭಾಯಿಸಬೇಕು ಈ ಕುರಿತು ಮಹಿಳೆಯರು ಚಿಂತನೆ ಮಾಡುವಂತಾಗಲಿ ಎಂದು ಮಹಿಳೆಯರ ಮಾನಸಿಕ ದೈಹಿಕ ಆರೋಗ್ಯದ ಮಹತ್ವವನ್ನು ತಿಳಿಸಿಕೊಟ್ಟರು. ಮುಂದೆ ಮುಖ್ಯವಾಚಕರಾದ ಖ್ಯಾತ ವಕೀಲರ ಮೀರಾ ಪಡುಕೆಯವರು ಭಾರತೀಯ ಚಿಂತನೆಯಲ್ಲಿ ಮಹಿಳೆ ವಿಷಯದ ಬಗ್ಗೆ ಮಾತನಾಡಿದರು.
ಮಾನಸಿಕ ಆರೋಗ್ಯ: 20 ಕಡೆಗಳಲ್ಲಿ ಚರ್ಚಾ ಸತ್ರ ನಡಿಯಿತು. ಮುಖ್ಯ ಸಭಾಂಗಣದಲ್ಲಿ 180 ಮಾತೆಯರಿದ್ದರು ಉಳಿದೆಲ್ಲಾ ಕಡೆ 50ರಷ್ಟು ಸಂಖ್ಯೆ ಇತ್ತು ಉತ್ತಮ ಸ್ಪಂದನೆ ಇತ್ತು. ಮಹಿಳೆ ಎದುರಿಸುತ್ತಿರುವ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಹಿಳೆಯರು ಚರ್ಚಿಸಿದರು. ಮೊಬೈಲ್ ಬಳಕೆಯ ಬಾಧಕ ಆರೋಗ್ಯ, ಮಕ್ಕಳಿಗೆ ಸಂಸ್ಕಾರದ ಕೊರತೆ, ಹೊಂದಾಣಿಕೆ, ಸಮಸ್ಯೆ ಡ್ರೆಸ್ ಲವ್ ಜಿಹಾದ್ ಶಿಕ್ಷಣ ಮಹಿಳಾ ಸುರಕ್ಷತೆ ಮಾನಸಿಕ ಆರೋಗ್ಯ ಮೊದಲಾದ ವಿಚಾರದಲ್ಲಿ ಚರ್ಚೆಗಳಾದವು ಮಹಿಳೆಯರು ಆತ್ಮೀಯವಾಗಿ ಮುಕ್ತವಾಗಿ ಚರ್ಚಿಸಿದರು.
ವಿಕಾಸದಲ್ಲಿ ಮಹಿಳೆಯ ಪಾತ್ರ : ಸಮಾರೋಪದಲ್ಲಿ ಮುಖ್ಯ ವಕ್ತಾರರಾಗಿ ಶ್ರೀಮತಿ ಎಚ್ಎಂ ರುಕ್ಮಿಣಿ ನಾಯಕ್ ಅವರು ಮಾತನಾಡಿ ವಿಕಾಸದಲ್ಲಿ ಮಹಿಳೆಯ ಪಾತ್ರ ದ ಬಗ್ಗೆ ಮಾತನಾಡಿದರು. ಮಾತೆಯರ ಬಳಿ ಎಲ್ಲಾ ಸವಾಲುಗಳಿಗೆ ಪರಿಹಾರ ಇರುತ್ತದೆಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಎದುರಾಗುವ ಎಲ್ಲಾ ಸವಾಲುಗಳನ್ನು ಎದುರಿಸಿ ಬೆಳೆದಾಗ ದೇಶದ ವಿಕಸನವಾಗುತ್ತದೆ ಎಂದರು. ಬಳಿಕ ಸ್ವಾಗತ ಸಮಿತಿಯ ಅಧ್ಯಕ್ಷರಾದ ಸುಮತ ನಾಯಕ್ ನಾರಿ ಶಕ್ತಿಯನ್ನು ಅಭಿನಂದಿಸಿ ಮಾತನಾಡಿದರು. ಸಂಕಲನದ ಬಳಿಕ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಪ್ರೀತಿ ಭೋಜನ: ಭಾಗವಹಿಸಿದ ಮಾತೆಯರಿಗೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು ನಮ್ಮ ಕಾರ್ಯಕರ್ತರು ಪ್ರೀತಿ ಭೋಜನವನ್ನು ಉಣ ಬಡಿಸಿದರು. ಒಟ್ಟು ಒಂದು 1200 ಸಾಮರ್ಥ್ಯದ ಸಭಾಂಗಣವು ಭರ್ತಿಯಾಗಿ ಸುಮಾರು 100 ಜನ ಮಾತೆಯರು ಸಭಾಂಗಣದ ಹೊರಭಾಗದಲ್ಲಿ ಕುಳಿತುಕೊಳ್ಳಬೇಕಾಯಿತು ಉದ್ಘಾಟನಾ ಸತ್ರದ ಬಳಿಕ ಒಂದಷ್ಟು ಮಹಿಳೆಯರು ತೆರಳಿದ್ದು 1121 ಮಾತೆಯರ ನೋಂದಾವಣಿಯಾಗಿದೆ.
ಕಾರ್ಯಕ್ರಮದಲ್ಲಿ ಸಂಜೀವಿನಿ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಳಿಗೆ ಮತ್ತು ಭೂ ಉತ್ಪನ್ನಗಳ ಮಳಿಗೆ ಇದ್ದವು. ಸಭಾಂಗಣದ ಪ್ರವೇಶ ದ್ವಾರದ ಬಳಿ ಭಾರತಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲು ಅವಕಾಶವಿತ್ತು, ಫೋಟೋ ಪ್ರಿಯರಿಗೆ ಸೆಲ್ಫಿ ಪಾಯಿಂಟ್, ಮಾತೃ ಭಾಷೆಯಲ್ಲಿ ಸಹಿ ಮಾಡಲು ಫಲಕವಿತ್ತು. ಚಂದದ ರಂಗೋಲಿ ಯನ್ನು ಬಿಡಿಸಲಾಗಿತ್ತು. ವೇದಿಕೆಯ ಮುಂಭಾಗದಲ್ಲಿ ತುಳುನಾಡಿನ ಹಳೆಯ ಪರಿಕರಗಳನ್ನು ಜೋಡಿಸಲಾಗಿತ್ತು. ವೇದಿಕೆಯನ್ನು ವಿವಿಧ ವಸ್ತುಗಳಿಂದ ಮಾತೆಯರೇ ಶೃಂಗಾರ ಮಾಡಿದ್ದರು..