ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದಲ್ಲಿ ನ್ಯುಮೋನಿಯಾ ಹೆಚ್ಚಾದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿಯೂ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿದೆ.
ಕಳೆದ ಎರಡು ವಾರಗಳಲ್ಲಿ ಬೆಂಗಳೂರಿನಲ್ಲಿ ಶೇ.20ರಷ್ಟು ನ್ಯುಮೋನಿಯಾ ಹೆಚ್ಚಳವಾಗಿದೆ. 1-15 ವರ್ಷದವರೆಗಿನ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಬೆಂಗಳೂರಿನ ಕೆಸಿ ಜನರಲ್, ರೈನ್‌ಬೋ, ಬೌರಿಂಗ್‌ಮ ಜಯನಗರ ಆಸ್ಪತ್ರೆಗಳಲ್ಲಿ ಮಕ್ಕಳು ಉಸಿರಾಟದ ತೊಂದರೆಯಿಂದ ದಾಖಲಾಗಿದ್ದಾರೆ.
ಜ್ವರ, ಕೆಮ್ಮು, ವೇಗದ ಉಸಿರಾಟ, ಉಸಿರಾಡುವಾಗ ಸದ್ದು, ಉಸಿರಾಡಲು ಕಷ್ಟಪಡುವುದು, ವಾಂತಿ, ಎದೆನೋವು ಇನ್ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಭೇಟಿ ಮಾಡಿ