ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ತಿರುವನಂತಪುರದಲ್ಲಿ ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ವರದಕ್ಷಿಣೆ ಕಿರುಕುಳ ಇದಕ್ಕೆ ಕಾರಣ ಎನ್ನಲಾಗಿದೆ.
ಮೆಡಿಕಲ್ ಕಾಲೇಜ್ನ ಪಿಜಿ ಡಾಕ್ಟರ್ 26 ವರ್ಷದ ಶಹಾನಾ ವಿವಾಹದ ಮಾತುಕತೆ ಅದೇ ಆಸ್ಪತ್ರೆಯ ಮತ್ತೊಬ್ಬ ವೈದ್ಯರ ಜೊತೆ ನಡೆದಿತ್ತು.
ಶಹಾನಾ ಸರ್ಜರಿ ವಿಭಾಗದಲ್ಲಿ ಪಿಜಿ ವಿದ್ಯಾರ್ಥಿನಿಯಾಗಿದ್ದರು. ಮದುವೆ ಗೊತ್ತಾಗಿದ್ದ ವೈದ್ಯರು ಶಹಾನ ಸ್ನೇಹಿತರೇ ಆಗಿದ್ದರು. ಅವರು ಬಂಗಾರ, ಭೂಮಿ ಹಾಗೂ ಬಿಎಂಡಬ್ಲೂ ಕಾರ್ ನೀಡುವಂತೆ ಶಹಾನಾ ಪೋಷಕರಲ್ಲಿ ಡಿಮ್ಯಾಂಡ್ ಮಾಡಿದ್ದರು.
ಇದು ಇಲ್ಲವಾದರೆ ಮದುವೆ ಬೇಡ ಎಂದು ಖಡಾಖಂಡಿತವಾಗಿ ಹೇಳಿದ್ದರು. ಇದನ್ನೆಲ್ಲಾ ನೀಡುವಷ್ಟು ಆರ್ಥಿಕವಾದ ಶಕ್ತಿ ಶಹಾನಾ ಪೋಷಕರಿಗೆ ಇರಲಿಲ್ಲ. ಇದೇ ಕಾರಣದಿಂದ ಶಹಾನಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಪೋಷಕರು ದೂರಿದ್ದಾರೆ.
ಪ್ರಕರಣ ದಾಖಲಾಗಿದ್ದು, ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರಕರಣದ ತನಿಖೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗಕ್ಕೆ ನಿರ್ದೇಶನ ನೀಡಿದ್ದಾರೆ.