ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಕೊರೋನಾ ಮತ್ತೆ ಎಂಟ್ರಿಕೊಟ್ಟಿದ್ದು, ಕೇಂದ್ರ ಅರೋಗ್ಯ ಸಚಿವಾಲಯ ನೀಡಿದ ಅಂಕಿಅಂಶದ ಪ್ರಕಾರ, 24 ಗಂಟೆಗಳಲ್ಲಿ 180 ಕೊರೊನಾ ಪ್ರಕರಣ ಪತ್ತೆಯಾಗಿದೆ. ಇದೀಗ ಕೊರೊನಾ ಸಕ್ರಿಯ ಪ್ರಕರಣದ ಸಂಖ್ಯೆ 744ಕ್ಕೆ ಏರಿಕೆಯಾಗಿದೆ.
ಸಾವಿನ ಸಂಖ್ಯೆ 5,33,306 ದಾಖಲಾಗಿದೆ . ದೇಶದಲ್ಲಿ ಕೋವಿಡ್ ಪ್ರಕರಣಗಳು ಸಂಖ್ಯೆ 4.50 ಕೋಟಿ ಎಂದು ಹೇಳಲಾಗಿದೆ.
ಆರೋಗ್ಯ ಸಚಿವಾಲಯದ ವೆಬ್ ಸೈಟ್ ಪ್ರಕಾರ,ಕೊರೋನಾದಿಂದ ಚೇತರಿಕೆಗೊಂಡವರ ಸಂಖ್ಯೆ 4,44,68,619ಕ್ಕೆ ಏರಿಕೆಯಾಗಿದೆ. ಹಾಗೂ ರಾಷ್ಟ್ರದಲ್ಲಿ ಚೇತರಿಕೆ ಪ್ರಮಾಣ 98.81 ಪ್ರತಿಶತದಷ್ಟಿದೆ ಎಂದು ಹೇಳಲಾಗಿದೆ. ಸಾವಿನ ಪ್ರಮಾಣ ಶೇಕಡಾ 1.19ರಷ್ಟಿದೆ.ಸಾವಿನ ಸಂಖ್ಯೆ 533306. ವ್ಯಾಕ್ಸಿನ್ ಪಡೆದವರ ಸಂಖ್ಯೆ 220,67,78,247. ಕಳೆದ ಒಂದು ದಿನದಲ್ಲಿ 17,605 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ.