ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಬಿಗ್‌ಬಾಸ್ ಮನೆ ಟಾಸ್ಕ್ ಹೆಸರಿನಲ್ಲಿ ರಣರಂಗವಾಗಿದೆ.
ಚೇರ್ ಮೇಲೆ ಒಂದು ಟೀಂ ಕುಳಿತಿರಬೇಕು, ಅವರನ್ನು ಯಾವುದಾದರೂ ರೀತಿ ಟಾರ್ಚರ್ ಕೊಟ್ಟು ಎಬ್ಬಿಸಬೇಕು ಅನ್ನೋದು ಇನ್ನೊಂದು ಟೀಮ್‌ಗೆ ಚಾಲೆಂಜ್.
ವಿನಯ್ ಹಾಗೂ ಮೈಕಲ್ ಚೇರ್ ಮೇಲೆ ಕುಳಿತಿದ್ದ ಸಂಗೀತಾ ಹಾಗೂ ಪ್ರತಾಪ್‌ಗೆ ಚಿತ್ರ ವಿಚಿತ್ರವಾಗಿ ಹಿಂಸೆ ನೀಡಿದ್ದಾರೆ. ಶೇವಿಂಗ್ ಕ್ರೀಂ, ಬಟ್ಟೆ ತೊಳೆಯುವ ಸೋಪಿನ ಪುಡಿಯ ನೀರನ್ನು ಎರಚಿದ್ದಾರೆ.
ಇದರಿಂದಾಗಿ ಸಂಗೀತಾ ಹಾಗೂ ಪ್ರತಾಪ್‌ಗೆ ಸಿಕ್ಕಾಪಟ್ಟೆ ಹಾನಿಯಾಗಿದ್ದು, ಇಬ್ಬರು ಆಸ್ಪತ್ರೆ ಸೇರಿದ್ದಾರೆ. ಈ ವಾರದಲ್ಲಾದ ಗಲಾಟೆ ಜಗಳ ಹಾಗೂ ಈ ರೀತಿ ಅಮಾನವೀಯ ವರ್ತನೆ ತೋರಿಸಿದ ವಿನಯ್ ಮೈಕಲ್‌ಗೆ ಸುದೀಪ್ ಏನ್ ಹೇಳ್ತಾರೆ? ಕಾದುನೋಡಬೇಕಿದೆ.