Wednesday, February 28, 2024

ನಡೀರಿ ನಡೀರಿ ಪರಿಷೆಗೆ ಹೋಗೋಣ.. ಇಂದಿನಿಂದ ಬಸವನಗುಡಿಯ ಐತಿಹಾಸಿಕ ಕಡ್ಲೆಕಾಯಿ ಪರಿಷೆ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಇಂದಿನಿಂದ ಆರಂಭವಾಗಲಿದೆ.

ದೊಡ್ಡ ಗಣೇಶನ ದೇವಸ್ಥಾನದ ಸುತ್ತ ಮುತ್ತ ಇಂದಿನಿಂದ ಐದು ದಿನಗಳ ಕಾಲ ಜಾತ್ರೆ ವಾತಾವರಣ ಇರಲಿದೆ. ಈ ಹಬ್ಬಕ್ಕೆ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದೆ.

ಈ ವರ್ಷದ ಪರಿಷೆ ಅಧಿಕೃತವಾಗಿ ಸೋಮವಾರದಿಂದ ಆರಂಭವಾಗಲಿದೆ. ದೊಡ್ಡ ಬಸವಣ್ಣ ಹಾಗೂ ಗಣೇಶನಿಗೆ ಕಡಲೆಕಾಯಿ ಅಭಿಷೇಕ ಮಾಡುವ ಮೂಲಕ ಮುಜರಾಯಿ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಕಡ್ಲೆಕಾಯಿ ಪರಿಷೆ ಜೊತೆಗೆ ಸಾಂಸ್ಕೃತಿ ಕಾರ್ಯಕ್ರಮಗಳನ್ನೂ ಆಯೋಜನೆ ಮಾಡಲಾಗುತ್ತದೆ. ನೂರಾರು ಸಂಖ್ಯೆಯಲ್ಲಿ ವ್ಯಾಪಾರಸ್ಥರು ಪರಿಷೆಗೆ ಆಗಮಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!