ಹಸಿವಾದಾಗ ಮಾತನಾಡಿಸೋಕೆ ಹೋಗಬಾರದು, ಏನೇ ಮಾತನಾಡಿದ್ರೂ ಇರಿಟೇಟ್ ಆದ ಉತ್ತರ ಸಿಗುತ್ತದೆ. ಕೋಪಕ್ಕೆ ಬೈಯುವ ಮಂದಿಯೂ ಇದ್ದಾರೆ. ಹಸಿವಾದಾಗ ಕೋಪ ಬರೋದ್ಯಾಕೆ?
ಇದಕ್ಕೆಲ್ಲಾ ಮುಖ್ಯ ಕಾರಣ ಬ್ಲಡ್ ಶುಗರ್ ಲೆವೆಲ್ಸ್, ಹೊಟ್ಟೆ ಹಸಿವಾದ ಸಮಯದಲ್ಲಿ ಬ್ಲಡ್ ಶುಗರ್ ಲೆವೆಲ್ ಕಡಿಮೆಯಾಗಿರುತ್ತದೆ. ಇದರಿಂದಾಗಿ ಅಡ್ರೆನಲಿನ್ ಹಾಗೂ ಕಾರ್ಟಿಸೊಲ್ ಎನ್ನುವ ಹಾರ್ಮೋನ್ ರಿಲೀಸ್ ಆಗುತ್ತದೆ. ಇದು ನಮ್ಮ ಬ್ಲಡ್ ಶುಗರ್ ಲೆವೆಲ್‌ನ್ನು ಮೇಲೆತ್ತಲು ಪ್ರಯತ್ನ ಮಾಡುತ್ತವೆ. ಜೊತೆಗೆ ಬೇಗ ಇರಿಟೇಟ್ ಆಗುವಂತೆ ಕೋಪ ಬರುವಂತೆ ಮಾಡುತ್ತವೆ.
ಸಿಟ್ಟಾದರೆ ಅದು ನಿಮ್ಮ ತಪ್ಪಲ್ಲ, ಹಾರ್ಮೋನ್‌ನದ್ದು! ಅಲ್ವಾ?