ಹಮಾಸ್ ಉಗ್ರರು ಅಡಗಿ ಕೂರ‍್ತಿದ್ದ ಸುರಂಗಗಳಿಗೆ ಸಮುದ್ರದ ನೀರು ಹರಿಸಿದ ಇಸ್ರೇಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಾಜಾದಲ್ಲಿ ಹಮಾಸ್ ಉಗ್ರರು ಅವಿತುಕೊಳ್ಳಲು ಬಳಸುತ್ತಿದ್ದ ಸುರಂಗಗಳಿಗೆ ಇಸ್ರೇಲ್ ಸೇನೆ ಸಮುದ್ರದ ನೀರನ್ನು ಹರಿಸಲು ಪ್ರಾರಂಭಿಸಿದೆ.

ಯುದ್ಧ ಸಾಮಾಗ್ರಿಗಳ ಜೊತೆ ತಾವೂ ಅಡಗಿ ಕೂರಲು ಹಮಾಸ್ ಉಗ್ರರು ಬಳಸುತ್ತಿದ್ದ ಸುರಂಗಗಳಿಗೆ ನೀರನ್ನು ಹರಿಸಲಾಗುತ್ತದೆ.

ಈ ಬಗ್ಗೆ ಇತರ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಸಮುದ್ರದ ನೀರು ಹರಿಸುವುದರಿಂದ ಶುದ್ಧ ಕುಡಿಯುವ ನೀರು ಪೂರೈಕೆಗೆ ಅಪಾಯವಾಗಲಿದೆ ಎಂದು ಇತರ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಸ್ರೇಲ್ ಸೇನೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!