ಶಬರಿಮಲೆಯಲ್ಲಿ ಜನವೋ ಜನ, ಸುರಕ್ಷತಾ ಕ್ರಮಗಳ ಕೊರತೆಗೆ ಸಿಟ್ಟಾದ ಭಕ್ತರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಬರಿಮಲೆ ದೇಗುಲಕ್ಕೆ ಹಿಂದೆಂದೂ ಆಗಮಿಸದಷ್ಟು ಭಕ್ತರು ಈ ಬಾರಿ ಆಗಮಿಸಿದ್ದಾರೆ.

ಎಷ್ಟೋ ಭಕ್ತರಿಗೆ ದೇವರ ದರುಶನವೂ ಸಿಗದೇ ವಾಪಾಸಾಗಿದ್ದಾರೆ, ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ, ಸುರಕ್ಷತಾ ಕ್ರಮಗಳೂ ಇಲ್ಲ ಎಂದು ಯಾತ್ರಾರ್ಥಿಗಳು ದೂರಿದ್ದಾರೆ.

ಇದೇ ಕಾರಣದಿಂದಾಗಿ ಅಷ್ಟು ದೂರ ಪ್ರಯಾಣಿಸಿದ ಭಕ್ತರು, ದೇವರ ದರುಶನ ಪಡೆಯದೇ ಮನೆಗೆ ವಾಪಾಸಾಗಿದ್ದಾರೆ. ಅಷ್ಟೇ ಅಲ್ಲದೆ ವ್ಯವಸ್ಥೆ ಸರಿ ಇಲ್ಲದ ಬಗ್ಗೆ ಹಲವಾರು ಭಕ್ತರು ರಸ್ತೆಯಲ್ಲೇ ನಿಂತು ಪ್ರತಿಭಟನೆ ನಡೆಸಿದ್ದಾರೆ.

ಗಂಟೆಗಟ್ಟಲೆ ಕಾದು ನಿಂತರೂ ದೇವರ ದರ್ಶನ ಆಗಿಲ್ಲ, ಅನ್ನ, ನೀರು ಸಿಕ್ಕಿಲ್ಲ, ಪಾರ್ಕಿಂಗ್ ಇಲ್ಲ, ಕ್ಯೂ ಇಲ್ಲ ಒಟ್ಟಾರೆ ವ್ತವಸ್ಥೆ ಸರಿಯಾಗಿಲ್ಲ ಎಂದು ಭಕ್ತರು ಆರೋಪಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!